
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.29: ಸಮಸ್ಯೆ ಹೇಳಿಕೊಂಡು ಹೋದ ಶ್ರೀ ಸಾಮಾನ್ಯರ ದೂರು ಸ್ವೀಕರಿಸದೆ ದುರ್ವರ್ತನೆ ತೋರಿಸುತ್ತಿದ್ದಾರೆಂದು ಕಿಕ್ಕೇರಿ ಪೆÇಲೀಸ್ ನಿರೀಕ್ಷಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ದಮನಿತ ಸೇನಾ ಸಮಿತಿಯ ಸದಸ್ಯರು ಕಿಕ್ಕೇರಿ ಪೆÇಲೀಸ್ ನೀರಿಕ್ಷಕರ ಅಮಾನತ್ತಿಗೆ ಒತ್ತಾಯಿಸಿ ಅಕ್ಟೋಬರ್ 08 ರ ಗುರುವಾರ ಕಿಕ್ಕೇರಿ ಪೆÇಲೀಸ್ ಠಾಣೆಯ ಮುಂದೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಮಿತಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜಿ.ಪವಿತ್ರಾ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಿಕ್ಕೇರಿ ಪೆÇಲೀಸ್ ನಿರೀಕ್ಷಕ ಎಸ್.ಎನ್.ಜಯರಾಮು ಅವರ ವಿರುದ್ದ ಆರೋಪಗಳ ಸುರಿಮಳೆಯನ್ನು ಸುರಿಸಿದರು.
ಕಿಕ್ಕೇರಿ ಪೆÇಲೀಸ್ ಠಾಣೆಯ ಗಾಣದಹಳ್ಳಿ ಗ್ರಾಮದ ಸರ್ವೆ 8/1 ರಲ್ಲಿನ 22 ಗುಂಟೆ ಕೃಷಿ ಭೂಮಿಯನ್ನು ಅದೇ ಗ್ರಾಮದ ಅನಸೂಯಮ್ಮ ಎನ್ನುವ ಅಮಾಯಕ ಮಹಿಳೆಯಿಂದ ಮೋಹನ್ ಕುಮಾರ್ ಎನ್ನುವವರು ಕ್ರಯಕ್ಕೆ ಬರೆಸಿಕೊಂಡಿದ್ದಾರೆ. ಮೋಹನ್ ಕುಮಾರ್ ಮತ್ತು ಅನಸೂಯಮ್ಮ ಅವರು ನೆರೆಹೊರೆಯವರಾಗಿದ್ದು ಮೋಹನ್ ಕುಮಾರ್ ಮಾತುಕತೆಯಂತೆ ನೀಡಬೇಕಾದಷ್ಟು ಹಣವನ್ನು ಕೊಡದೆ ಅನಸೂಯಮ್ಮ ಅವರಿಂದ ಅವರ ಜಮೀನನ್ನು ಕ್ರಯಕ್ಕೆ ಮಾಡಿಸಿಕೊಂಡಿದ್ದು ಈಗ ಹಣ ಕೊಡಲು ಸತಾಯಿಸುತ್ತಿದ್ದಾರೆ. ಕೊಡಬೇಕಾದ ಹಣಕ್ಕೆ ಒತ್ತಾಯಿಸುತ್ತಿದ್ದ ಅನಸೂಯಮ್ಮ ಅವರ ಮೇಲೆ ಮೋಹನ್ ಕುಮಾರ್ ಕಿಕ್ಕೇರಿ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೋಹನ್ ಕುಮಾರ್ ನೀಡಿದ ದೂರಿಗೆ ಪ್ರತಿದೂರು ನೀಡಿ ಕೊಟ್ಟ ಮಾತಿನಂತೆ ತಮ್ಮ ಜಮೀನು ಬಾಬ್ತು ಹಣ ಕೊಡಿಸುವಂತೆ ಪೆÇಲೀಸ್ ಠಾಣೆಗೆ ನ್ಯಾಯಕ್ಕಾಗಿ ಹೋದ ಅನಸೂಯಮ್ಮ ಅವರ ದೂರು ಸ್ವೀಕರಿಸದ ಕಿಕ್ಕೇರಿ ಪೆÇಲೀಸ್ ನಿರೀಕ್ಷಕರು ಅಮಾಯಕ ಮಹಿಳೆ ಅನಸೂಯಮ್ಮ ಅವರಿಗೆ ಠಾಣೆಯಲ್ಲಿ ಕನಿಷ್ಠ ಗೌರವವನ್ನು ನೀಡದೆ ರಾತ್ರಿಯವರೆಗೂ ಯಾವುದೇ ವಿಚಾರಣೆ ನಡೆಸದೆ ಕಾಯಿಸಿದ್ದಲ್ಲದೆ ಏರುಧ್ವನಿಯಲ್ಲಿ ಮಾತನಾಡಿ ಉದ್ದಟತನ ಪ್ರದರ್ಶಿಸಿದ್ದಾರೆ. ಠಾಣೆಗೆ ಯಾರೇ ದೂರು ನೀಡಲು ಬಂದರೂ ಅದನ್ನು ಸ್ವೀಕರಿಸಿ ನ್ಯಾಯ ಕೊಡಿಸಬೇಕಾದ ಜವಾಬ್ದಾರಿ ಠಾಣಧಿಕಾರಿಗಳಿಗೆ ಸೇರಿದ್ದು.
ಆದರೆ ರೈತ ಮಹಿಳೆ ಅನಸೂಯಮ್ಮ ಅವರ ದೂರು ಸ್ವೀಕರಿಸದೆ ಪೆÇಲೀಸರು ಕರ್ತವ್ಯ ಲೋಪ ಮಾಡಿದ್ದಾರೆ. ಈ ಕುರಿತು ಈಗಾಲೇ ರಾಜ್ಯ ಗೃಹ ಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿಗಳಿಗೆ , ಜಿಲ್ಲಾ ಪೆÇಲಿಸ್ ವರಿಷ್ಟಾಧಿಕಾರಿಗಳು ವಿಭಾಗೀಯ ಪೆÇಲೀಸ್ ಅಧಿಕಾರಿಗಳಿಗೂ ಲಿಖಿತ ದೂರು ನೀಡಿದ್ದು ಕರ್ತವ್ಯ ಲೋಪ ಎಸಗಿರುವ ಪಿ.ಐ ಜಯರಾಂ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಮನಿತರ ಸೇನಾ ಸಮಿತಿ ಅಕ್ಟೋಬರ್ 08 ರಂದು ಕಿಕೇರಿ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಸಮಿತಿಯ ರಾಜ್ಯಧ್ಯಕ್ಷೆ ಜಿ.ಪವಿತ್ರಾ ತಿಳಿಸಿದ್ದಾರೆ.
ದಮನಿತ ಸೇನಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬೆಂಗಳೂರಿನ ಗೋವಿಂದರಾಜು, ತುಮಕೂರು ಘಟಕದ ಜಿಲ್ಲಾಧ್ಯಕ್ಷ ಪ್ರತಾಪ ಪಾಳೇಗಾರ, ತಿಪಟೂರು ತಾಲೂಕು ಘಟಕದ ಅಧ್ಯಕ್ಷ ಜಯಕುಮಾರ್ ಹಾಗೂ ಗಾಣದಹಳ್ಳಿಯ ಮಂಜು ಸುದ್ದಿಗೋಷ್ಠಿಯಲ್ಲಿದ್ದರು.


























