Home ಜಿಲ್ಲೆ ಬೆಂಗಳೂರು ಜನರ ಪ್ರೀತಿ, ವಿಶ್ವಾಸವೇ ನನ್ನ ಶಕ್ತಿ: ಹೂಡಿ ವಿಜಯ್ ಕುಮಾರ್

ಜನರ ಪ್ರೀತಿ, ವಿಶ್ವಾಸವೇ ನನ್ನ ಶಕ್ತಿ: ಹೂಡಿ ವಿಜಯ್ ಕುಮಾರ್

ಮಾಲೂರು, ಅ. ೧೬: ಕಳೆದ ಹತ್ತಾರು ವರ್ಷಗಳಿಂದ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ನನಗೆ ತಮ್ಮ ಗ್ರಾಮದ ಜನತೆಗೆ ಹಾಗೂ ಅಭಿಮಾನಿಗಳಿಗೆ ಪ್ರೀತಿಯಿಂದ ಜನ್ಮದಿನದ ಶುಭಾಶಯಗಳನ್ನು ಕೋರಿರುವುದು ಅಪಾರ ಸಂತಸ ತಂದಿದೆ ಎಂದು ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಹೂಡಿ ವಿಜಯ್ ಕುಮಾರ್ ಹೇಳಿದರು.


ನಗರದ ಹೊರವಲಯದ ವೈಟ್ ಗಾರ್ಡನ್ ಸಮೀಪದ ತಮ್ಮ ನಿವಾಸದ ಆವರಣದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.


ಮಾಲೂರು ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಆರೋಗ್ಯ, ಶಿಕ್ಷಣ ಸೇರಿದಂತೆ ಬಡಜನರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಸೋತಿದ್ದರೂ, ತಾಲೂಕಿನ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದೇನೆ. ಮುಂದೆಯೂ ಇನ್ನಷ್ಟು ಸಮಾಜಮುಖಿ ಕಾರ್ಯಗಳು ಹಾಗೂ ದಾನಧರ್ಮಗಳನ್ನು ಕೈಗೊಳ್ಳಲು ಜನರ ಆಶೀರ್ವಾದ ಅಗತ್ಯವಾಗಿದೆ ಎಂದು ಹೇಳಿದ್ದಾರೆ.


ನನ್ನ ಸೇವಾ ಕಾರ್ಯಗಳನ್ನು ಗುರುತಿಸಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಜನ್ಮದಿನದ ಶುಭಾಶಯಗಳನ್ನು ಕೋರಿರುವುದು ನನಗೆ ಮತ್ತಷ್ಟು ಉತ್ಸಾಹ ನೀಡಿದೆ ಎಂದರು.


ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ನನ್ನನ್ನು ನಂಬಿರುವ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಎನ್‌ಡಿಎ ಮೈತ್ರಿಯ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸೂಕ್ತ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.


ಈ ತಿಂಗಳ ೨೩ರಂದು ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುರೇಶ್ ಕುಮಾರ್ ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ವ್ಯಾಪಕ ಪ್ರಚಾರ ನಡೆಸುತ್ತಿದ್ದು, ಪದವೀಧರ ಮತದಾರರ ಬೆಂಬಲ ಪಡೆಯಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಿ ಜನಸೇವೆಯನ್ನು ಮುಂದುವರಿಸಲು ತಾಲೂಕಿನ ಜನರ ಆಶೀರ್ವಾದ ಮತ್ತು ಪ್ರೀತಿ-ವಿಶ್ವಾಸ ಅಗತ್ಯವಾಗಿದೆ ಎಂದು ಹೂಡಿ ವಿಜಯ್ ಕುಮಾರ್ ಹೇಳಿದರು.


ಈ ಸಂದರ್ಭದಲ್ಲಿ ಅಭಿಮಾನಿಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಅವರ ಜನ್ಮದಿನದ ಶುಭಾಶಯ ಕೋರಿದರು.


ಹೊಸಕೋಟೆ ಜಯಣ್ಣ, ತಾಲೂಕು ಜೆಡಿಎಸ್ ಮುಖಂಡರಾದ ದೇವರಾಜ್ ರೆಡ್ಡಿ, ರಾಜಾರಾಂ, ಹನುಮಪ್ಪ ಗೋಪಾಲ ಗೌಡ, ಬಿ.ಆರ್. ವೆಂಕಟೇಶ್, ಮೈ ನಾರಾಯಣಸ್ವಾಮಿ, ತಿಮ್ಮನಾಯಕನಹಳ್ಳಿ ನಾರಾಯಣಸ್ವಾಮಿ, ಗೋಪಾಲ್ ಗೌಡ, ಸುಬ್ರಮಣಿ, ಎಸ್.ಎಂ. ವೆಂಕಟೇಶ್, ಲಕ್ಷ್ಮಿಕಾಂತ್ ಕುಟ್ಟಿ, ಶಿವಾರ ನಾರಾಯಣಸ್ವಾಮಿ, ಅಮರಾವತಿ ಶ್ರೀವಳ್ಳಿ, ಸುಮಾ ಮಂಜುನಾಥ್ ಸೇರಿದಂತೆ ಅನೇಕ ಮುಖಂಡರು ಹಾಗೂ ಅಭಿಮಾನಿಗಳು ಹೂಡಿ ವಿಜಯ್ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.