Home ಜಿಲ್ಲೆ ಐ.ಇ.ಇ.ಇ. ಎರಡನೇಯ ಅಂತರಾಷ್ಟ್ರಿಯ ಮಟ್ಟದ ತಾಂತ್ರಿಕ ಸಮ್ಮೇಳನದ ಸಮಾರೋಪ

ಐ.ಇ.ಇ.ಇ. ಎರಡನೇಯ ಅಂತರಾಷ್ಟ್ರಿಯ ಮಟ್ಟದ ತಾಂತ್ರಿಕ ಸಮ್ಮೇಳನದ ಸಮಾರೋಪ

ಸಂಜೆವಾಣಿ ವಾರ್ತೆ

ಬಳ್ಳಾರಿ, ಆ.9:  ನಗರದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ವೀ.ವಿ.ಸಂಘದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಐ.ಇ.ಇ.ಇ. ಎರಡನೇಯ ಅಂತರಾಷ್ಟ್ರಿಯ ಮಟ್ಟದ ತಾಂತ್ರಿಕ ಸಮ್ಮೇಳನದ ಸಮಾರೋಪ ಸಮಾರಂಭ ನಿನ್ನೆ ಜರುಗಿತು.

ಅಂತರರಾಷ್ಟ್ರೀಯ ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ತೈವಾನ್ ದೇಶದ ಡಾ. ವೀ ಚಾಂಗ್ ಯೇ ಅವರು ಅಲ್ಗಾರಿದಮ್ ವಿನ್ಯಾಸ, ಆಪ್ಟಿಮೈಸೇಶನ್, ನೆಟ್ವರ್ಕ್ ರಿಲಯಬಿಲಿಟಿ, Machine Learning, Deep Learning, Reinforcement Learning ಹಾಗೂ AI lot ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಅವರ ಸಂಶೋಧನಾ ಕ್ಷೇತ್ರಗಳ ಹಿನ್ನೆಲೆಯಲ್ಲಿ “ AI ಆಧಾರಿತ ಆಪ್ಟಿಮೈಸೇಶನ್, ಬುದ್ಧಿವಂತ ನಿರ್ಧಾರ ವ್ಯವಸ್ಥೆಗಳು, ನೆಟ್ವರ್ಕ್ ವಿಶ್ವಾಸಾರ್ಹತೆ, lot ಮತ್ತು AI ಸಂಯೋಜನೆ ಹಾಗೂ ಸಂಕೀರ್ಣ ಸಮಸ್ಯೆಗಳಿಗೆ ಪರಿಣಾಮಕಾರಿ ಅಲ್ಗಾರಿದಮ್ಗಳ ಅಭಿವೃದ್ಧಿ ಪ್ರಮುಖ ಸಂಶೋಧನಾ ಅವಕಾಶಗಳಾಗಿವೆ. ಪ್ರಸ್ತುತ AI ಕ್ಷೇತ್ರದಲ್ಲಿರುವ ಪ್ರಮುಖ ಸಂಶೋಧನಾ ಅಂತರಗಳಲ್ಲಿ ಡೇಟಾದ ಗುಣಮಟ್ಟ ಮತ್ತು ಲಭ್ಯತೆ, AI ಮಾದರಿಗಳ ನಿಖರತೆ, Explainable AI, ಡೇಟಾ ಗೌಪ್ಯತೆ ಮತ್ತು ಭದ್ರತೆ, ಕಡಿಮೆ ವಿದ್ಯುತ್ ಬಳಕೆಯ AI ವ್ಯವಸ್ಥೆಗಳು, edge AI, ವಿವಿಧ ಕ್ಷೇತ್ರಗಳಿಗೆ ಹೊಂದಿಕೊಳ್ಳುವ AI ಮಾದರಿಗಳು ಹಾಗೂ ನೈಜ-ಸಮಯದ ನಿರ್ಧಾರ ಸಾಮಥ್ರ್ಯ ಪ್ರಮುಖವಾಗಿವೆ.” ಎಂದು ಅವರು ಹೇಳಿದರು.

ಫಿಲಿಫೈನ್ಸ್ ದೇಶದ ಶ್ರೀ ಲೀನ್ ಕಾರ್ಲೊ ಸ್ಯಾಂಟೋಸ್ ಟೊಲೆಂಟಿನೊ ಅವರು “ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಮೈಕ್ರೋಎಲೆಕ್ಟ್ರಾನಿಕ್ಸ್, System-on-Chip, wearable AI ಮತ್ತು computing-in-memory  ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನಾ ಅನುಭವ ಹೊಂದಿದ್ದಾರೆ. ಆದ್ದರಿಂದ AI  ಮತ್ತು ಸುಧಾರಿತ ಹಾಡ್ರ್ವೇರ್ಗಳ ಸಂಯೋಜನೆ, ಕಡಿಮೆ ವಿದ್ಯುತ್ ಬಳಕೆಯ AI ಚಿಪ್ಗಳು, edge AII, wearable devices ಮತ್ತು computing-in-memory  ಆಧಾರಿತ ಬುದ್ಧಿವಂತ ವ್ಯವಸ್ಥೆಗಳು ಭವಿಷ್ಯದ ಪ್ರಮುಖ ಸಂಶೋಧನಾ ಕ್ಷೇತ್ರಗಳಾಗಿವೆ ಎಂದು ಅವರು ಒತ್ತಿ ಹೇಳಿದರು. AI ಕ್ಷೇತ್ರದಲ್ಲಿ ಮುಂದಿನ ಹಂತದ ಸಂಶೋಧನೆ ಕೇವಲ ಸಾಫ್ಟ್ವೇರ್ ಅಭಿವೃದ್ಧಿಗೆ ಸೀಮಿತವಾಗದೆ, AI–IoT, AI–Robotics, AI–Healthcare, AI–Semiconductor, AI–Biomedical  ಮತ್ತು AI –engrgy ಕ್ಷೇತ್ರಗಳ ಸಮನ್ವಯದತ್ತ ಸಾಗಬೇಕಾಗಿದೆ. ವಿಶೇಷವಾಗಿ ಕಡಿಮೆ ವಿದ್ಯುತ್ ಬಳಕೆ, ವೇಗವಾದ ಸಂಸ್ಕರಣೆ, ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಕಡಿಮೆ ವೆಚ್ಚದಲ್ಲಿ ಕಾರ್ಯನಿರ್ವಹಿಸುವ AI ವ್ಯವಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಸಂಶೋಧನಾ ಅವಕಾಶಗಳಿವೆ. ಇಂತಹ ಅಂತರರಾಷ್ಟ್ರೀಯ ತಜ್ಞರೊಂದಿಗೆ ನಡೆಯುವ ವಿಚಾರ ವಿನಿಮಯವು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಅಧ್ಯಾಪಕರಿಗೆ ಹೊಸ ಸಂಶೋಧನಾ ವಿಷಯಗಳನ್ನು ಗುರುತಿಸಲು, ಅಂತರರಾಷ್ಟ್ರೀಯ ಸಹಯೋಗವನ್ನು ಬೆಳೆಸಲು ಹಾಗೂ ಜಾಗತಿಕ ಮಟ್ಟದ ಸಂಶೋಧನಾ ಪ್ರಕಟಣೆಗಳನ್ನು ಕೈಗೊಳ್ಳಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಜನರಲ್ ಚೇರ್-ಐಈಈಈ ಹಾಗೂ ಪ್ರಾಂಶುಪಾಲರು, ಡಾ. ಹೆಚ್. ಮಹಾಬಲೇಶ್ವರ ಆರಗನೈಸಿಂಗ್  ಚೇರ್-ಐಈಈಈ ಹಾಗೂ ಉಪ-ಪ್ರಾಂಶುಪಾಲರು, ಡಾ|| ಸವಿತ ಸೊನೊಳಿ, ಎಐಕೆಐಐಇ-2026  ಪದಾಧಿಕಾರಿಗಳಾದ ಡಾ.ಟಿ.ಹನುಮಂತರೆಡ್ಡಿ, ಡಾ.ಎಸ್.ಕೊಟ್ರೇಶ್, ಡಾ.ವೀರಭದ್ರಪ್ಪ ಅಲಗೂರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿವೃಂದದವರೂ ಭಾಗವಹಿಸಿದ್ದರು.