
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ,19- ಐತಿಹಾಸಿಕ ಪರಂಪರೆಯನ್ನು ಮುಂದುವರೆಸುವುದು ಪ್ರತಿಯೊಬ್ಬ ನಾಗರೀಕರ ಪ್ರಾಥಮಿಕ ಜವಬ್ದಾರಿಯಾಗಿದೆಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ. ಬಸವರಾಜ ಅಭಿಪ್ರಾಯಪಟ್ಟರು.
ಅವರು ಇಂದು ಕಸಾಪ ಜಿಲ್ಲಾ ಘಟಕ, ವೀರಶೈವ ಕಾಲೇಜು ಹಾಗೂ ಇತಿಹಾಸ ಅಕಾಡೆಮಿ ಬಳ್ಳಾರಿ ಜಿಲ್ಲಾ ಘಟಕ ಹಾಗೂ, ಟಿ ಹೆಚ್ ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ನಿಂದ ನಗರದ ವೀರಶೈವ ಕಾಲೇಜನಲ್ಲಿ
ಟಿ ಹೆಚ್ ಎಂ ಸದಾಶಿವಯ್ಯ ಮತ್ತು ಸರ್ವ ಮಂಗಳಮ್ಮ ದತ್ತಿ ಟಿ ಹೆಚ್ ಎಂ ಶಿವಯ್ಯ ಮತ್ತು ಶಿವಗಂಗಮ್ಮ ದತ್ತಿ, ಅತಿ ಹೆಚ್ಚು ಎಂ ಶಿವರುದ್ರ ಶಾಸ್ತ್ರಿ ಮತ್ತು ಟಿ.ಹೆಚ್.ಎಂ ವೀರಮ್ಮ ದತ್ತಿ ಹಾಗೂ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತಿಹಾಸ ಪ್ರಜ್ಞೆಯು ನಾವು ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗಿದೆಂದರು.
ನಂದಿಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಹೆಚ್. ತಿಪ್ಪೇಸ್ವಾಮಿ ವಿಶೇಷ ಉಪನ್ಯಾಸ ನೀಡಿ, ಬಳ್ಳಾರಿ ಜಿಲ್ಲೆ ಪ್ರಾಗೈತಿಹಾಸಿಕ ಯುಗದಿಂದಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಅತ್ಯಂತ ವೈಭವಯುತವಾಗಿ ಸಾಮ್ರಾಜ್ಯವನ್ನು ಆಳಿದ ಅನೇಕ ರಾಜಮನೆತನಗಳ ಭವ್ಯ ಇತಿಹಾಸ ಬಳ್ಳಾರಿ ಜಿಲ್ಲೆಗೆ ಇದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು.
ರಾಷ್ಟ್ರೋತ್ಥಾನ ಶಾಲೆಯ ಸಂಗೀತ ಶಿಕ್ಷಕ ಶರಣಬಸವರಾಜ ಹರ್ಷ ಅಬರ ತಬಲಾ ಸಾಥ್ ನೊಂದಿಗೆ ಗೀತ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಜಡೇಶ ಎಮ್ಮಿಗನೂರು ಜನಪದ ಗೀತೆಗಳನ್ನು ಹಾಡಿದರು.
ಉದ್ಯಮಿ ಮರೇಗೌಡ ಪಾಟೀಲ ಮಾತನಾಡಿದರು. ಸಮಾಜ ಸೇವಕರಾದ ಪಿ ಬಂಡೇಗೌಡ, ಕಾರಪುಡಿ ಮುದ್ದನಗೌಡ, ಕ.ಸಾ.ಪ ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ವಾಸವಿ ಪ್ರೌಢಶಾಲೆಯ ನಿವೃತ್ತ ಸಂಗೀತ ಶಿಕ್ಷಕ ಫ್ಯಾನ್ಸಿಸ್, ನಿವೃತ್ತ ಪ್ರಾಂಶುಪಾಲರ ಸದಾಶಿವಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ
ಡಾ. ಶಾಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಹಿರೇಮಠ ಸ್ವಾಗತಿಸಿದರು. ಡಾ. ಭ್ರಮರಾಂಭ ಯಾಟೆ ಕಾರ್ಯಕ್ರಮ ನಿರೂಪಿಸಿದರು. ಕಪ್ಪಗಲ್ಲು ಬಿ ಚಂದ್ರಶೇಖರಚಾರ್ ವಂದನಾರ್ಪಣೆ ಸಲ್ಲಿಸಿದರು.





















