Home ಜಿಲ್ಲೆ ಎರಡನೇ ದಿನಕ್ಕೆ ಕಾಲಿಟ್ಟ  ರೈತರ ಅಹೋರಾತ್ರಿ  ಹೋರಾಟ

ಎರಡನೇ ದಿನಕ್ಕೆ ಕಾಲಿಟ್ಟ  ರೈತರ ಅಹೋರಾತ್ರಿ  ಹೋರಾಟ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಸೆ,19- ಜಿಲ್ಲೆಯ ಕುರುಗೋಡಿನ ನೀರಾವರಿ ಇಲಾಖೆಯ ಕಚೇರಿ ಬಳಿ ನಡೆಯುತ್ತಿರುವ  ರೈತರ ಅಹೋರಾತ್ರಿ ಮತ್ತು ಅನಿರ್ದಿಷ್ಟಾವಧಿ ಹೋರಾಟ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.

ನಿನ್ನೆ ರಾತ್ರಿ  ಸ್ಥಳಕ್ಕೆ ಆಗಮಿಸಿದ ಕಾರ್ಯನಿರ್ವಾಹಕ ಅಭಿಯಂತರರು ಕಾಲುವೆಗೆ ನೀರು ಬಿಡುವುದರ ಕುರಿತು ರೈತರೊಂದಿಗೆ ನಡೆಸಿದ ಚರ್ಚೆ ವಿಫಲವಾಗಿದ್ದರಿಂದ ಹೋರಾಟ ಎರಡನೇ ದಿನವು ಮುಂದುವರೆದಿದೆ.

ಈಗಾಗಲೇ ದ ನಡೆದ ಹೋರಾಟದ ಸಂದರ್ಭದಲ್ಲಿ ಅಧಿಕಾರಿಗಳು ನೀಡಿದ ಭರವಸೆ ಈಡೇರಿಸಲಿಲ್ಲ ಆದ್ದರಿಂದ ರೈತರು ಅಧಿಕಾರಿಗಳ ಭರವಸೆ ಮೇಲೆ ಸಂಪೂರ್ಣವಾಗಿ ನಂಬಿಕೆ ಕಳೆದುಕೊಂಡಿದ್ದು, ಈಗ ಮಳೆ ಬರುವವರೆಗೂ ಡಿ.7 ಕಾಲುವೆಗೆ ಕನಿಷ್ಠ  600 ಕ್ಯೂಸೆಕ್ಸ್ ನೀರು ಹರಿಸುವಂತೆ ಪಟ್ಟು ಹಿಡಿದು ಧರಣಿ ನಡೆಸುತ್ತಿದ್ದಾರೆ. ಇಷ್ಟು ಪ್ರಮಾಣದ ನೀರು ಬಿಟ್ಟಲ್ಲಿ ಮಾತ್ರ ರೈತರು ಬೀಜ ಬಿತ್ತಲು ಸಾಧ್ಯ ಮತ್ತು ಬಿತ್ತಿದ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯ. ಆದ್ದರಿಂದ ಸರ್ಕಾರ ಕೂಡಲೇ ಡಿ.7 ಕಾಲುವೆಗೆ 600 ಕ್ಯೂಸೆಕ್ಸ್ ನೀರು ಬಿಡಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲೋದಿಲ್ಲ ಎಂದು ಎಚ್ಚರಿಸಿದರು

 ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ,   ಕಾರ್ಯದರ್ಶಿ ಗುರಳ್ಳಿ ರಾಜ,  ತಾಲೂಕು ಮುಖಂಡರಾದ  ಶೇಖರ್, ಎಚ್ ಎನ್ ಬಸವರಾಜ್, ಹೇಮರೆಡ್ಡಿ, ಜಿ.ಕೆಶಪ್ಪ, ಕೀರ್ತಿ ರೆಡ್ಡಿ,  ಹೇಮಂತ್ ರಾಜ್, ಹೆಗ್ಗೂರು ಬಸವರಾಜ, ಕೆ ರಾಮಲಿಂಗ,    ಹನುಮಂತಪ್ಪ, ಬಸವರಾಜ್, ಕಡ್ಲೆ ದೇವಣ್ಣ, ಲಕ್ಷ್ಮಿಕಾಂತ್ ರೆಡ್ಡಿ,  ವಾಯುಪುತ್ರ ರೆಡ್ಡಿ,  ಮೋಹನ್, ತಾತಯ್ಯ  ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.