
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.04: ನಗರದ ವೀರಶೈವ ವಿದ್ಯಾವರ್ಧಕ ಸಂಘದ ಪ್ರಥಮ ಕನ್ನಡ ಶಾಲೆ ಹೀರದ ಸೂಗಮ್ಮ ಶಾಲೆಯ ಶತಮೋನೋತ್ಸವ ಈ ತಿಂಗಳ 8 ಮತ್ತು 9 ರಂದು ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ತಿಳಿಸಿದರು.
ನಗರದ ಹೊಸ ಬಸ್ ನಿಲ್ದಾಣದ ಎದುರಿನಲ್ಲಿರುವ ಶಾಲೆಯ ಆವರಣದಲ್ಲಿ ಶತಮಾನೋತ್ಸವ ಕುರಿತು ಸುದ್ದಿಗೋಷ್ಟಿ ನಡೆಸಿದ. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಣೇಕಲ್ ಮಂಹಾತೇಶ್, ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್, ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ಖಜಾಂಚಿ ಬೈಲುವದ್ದಿಗೇರಿ ಎರ್ರಿಸ್ವಾಮಿ ಹಾಗು ಸಹ ಕಾರ್ಯದರ್ಶಿಯೂ ಆಗಿರುವ
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಯಾಳ್ಪಿ ಮೇಟಿ ಪಂಪನಗೌಡ ಮೊದಲಾದವರು.
ಶತಮಾನೋತ್ಸವದ ಅಂಗವಾಗಿ ಆ 7 ರಂದು ಸಂಜೆ 4 ಗಂಟೆಗೆ ನಗರದ ಮರಿಸ್ವಾಮಿ ಮಠದಿಂದ ತೇರು ಬೀದಿ ಮಾರ್ಗವಾಗಿ ಶಾಲೆಯ ದಾನಿಗಳ, ಶ್ರೀಗಳ ಭಾವಚಿತ್ರದ ಮೆರವಣಿಗೆ ಶಾಲೆಯ ಮಕ್ಕಳು, ಕಲಾತಂಡಗಳು ಹಾಗು ಸಮಾಜದ ಗಣ್ಯರಿಂದ ಶಾಲೆಯ ಆವರಣದವರೆಗೆ ನಡೆಯಲಿದೆ.
ಆ 8 ರಂದು ಬೆಳಿಗ್ಗೆ 10 ಗಂಟೆಗೆ ಎಮ್ಮಿಗಮೂರಿನ ಮಹಾಂತ ಶ್ರೀಗಳ ಸಾನಿದ್ಯದಲ್ಲಿ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ್, ಬಿ.ನಾಗೇಂದ್ರ ಸೇರಿದಂತೆ ಸಂಸದರು, ಶಾಸಕರು, ಮಾಜಿ ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಣೇಕಲ್ ಮಂಹಾತೇಶ್ ಅಧ್ಯಕ್ಷತೆವಹಿಸಲಿದ್ದು.
ಸಚಿವ ಶರಣ ಪ್ರಕಾಶ್ ಪಾಟೀಲ್ ಶ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಈ ವೇಳೆ ಶಾಲೆಯ ಶತಮಾನೋತ್ಸವದ ನೆನಪಿಗಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ
ತಲಾ 150 ಬಾಲಕರ ಮತ್ತು ಬಾಲಕಿಯರಿಗೆ ಪ್ರತ್ಯೇಕ ಉಚಿತ ಹಾಸ್ಟಲ್ ನಿರ್ಮಿಸಲು ಸಂಸದ ಈ ತುಕರಾಂ ಅವರು ಶಂಕುಸ್ಥಾಪನೆ ನೆರವೆರಿಸಲಿದ್ದಾರೆ.
ಶಾಲೆಯ ದಾನಿಗಳ ಶಿಲಾ ಮೂರ್ತಿಗಳ ಸ್ಥಾಪನೆ ಸಂಘದ ಸಂಸ್ಥಾಪಕರ ಭಾವಚಿತ್ರಗಳಿಗೆ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಪುಷ್ಪ ನಮನ ಸಲ್ಲಿಸಲಿದ್ದಾರೆ.
ಸಂಜೆ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಗಣ್ಯರಿಗೆ ಗೌರವ ಸನ್ಮಾನ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ, ನಂತರ ನಾಟಕ ಪ್ರದರ್ಶನವಿದೆ.
ಆ.9 ರಂದು ಬೆಳಿಗ್ಗೆ 10 ಕೊಟ್ಟೂರು ಸಂಸ್ಥಾನ ಮಠದ ಶ್ರೀಗಳ ಸಾನಿಧ್ಯದಲ್ಲಿ, ಸಿರಿಗೇರಿ ಪನ್ನರಾಜ್ ಅಧ್ಯಕ್ಷತೆಯಲ್ಲಿ ವಿಶ್ರಾಂತ ಗುರುಗಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಹಳೇ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಇದೆ.
ಸಂಜೆ 4 ಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳಿಂದ ಸಮಾರೋಪ ಭಾಷಣ, ಸಚಿವ, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಚಿವ ಈಶ್ವರ ಖಂಡ್ರೆ, ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷರಾಗಿರುವ ವೀಣಾ ಕಾಶಪ್ಪನವರ್ ಮೊದಲಾದವರು ಪಾಲ್ಗೊಳ್ಳಲಿದ್ದು. ನಂತರ ಸಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನವಿದೆಂದು ತಿಳಿಸಿದರು.
ಈ ವೇಳೆ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಪಲ್ಲೇದ ಪಂಪಾಪತಿ. ಶಾಲೆಯ ಆಡಳಿತ ಮಂಡಳಿ ಸದಸ್ಯರಾದ
ಬಾಡದಿ ಬದ್ರಿನಾಥ, ಮಹೇಶ್, ಶ್ರೀಧರಗಡ್ಡೆ ವೀರನಗೌಡ, ಶಾಲೆಯ ಮುಖ್ಯಗುರುಗಾಳಾದ ಮರಿಸ್ವಾಮಿ, ಶರಣಯ್ಯ ಮೊದಲಾದವರು ಇದ್ದರು.
































