
ನಗರದ ಕನಕಪುರ ರಸ್ತೆ, ರವಿಶಂಕರ್ ಗುರೂಜಿ ಆರ್ಟ್ ಆಫ್ ಲಿವಿಂಗ್ ಆಶ್ರಮದವರು ನೂರಾರು ಎಕರೆ ದಲಿತರ, ಬಡವರ, ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿ ಮಾಡಿರುವುದನ್ನು ಖಂಡಿಸಿ ಸಮತಾ ಸೈನಿಕ ದಳದ ಮುಖಂಡರು, ಕಾರ್ಯಕರ್ತರು ಜು. ೧೭ ರಿಂದ ಆಶ್ರಮದ ಮುಂಭಾಗ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು. ಇಂದಿಗೆ ೧೯ನೇ ದಿನಕ್ಕೆ ಕಾಲಿಟ್ಟಿದೆ. ಈ ಸತ್ಯಾಗ್ರಹದಲ್ಲಿ ರಾಜ್ಯ ಅಧ್ಯಕ್ಷ ಜಿ.ಸಿ. ವೆಂಕರಮಣಪ್ಪ, ಯುವ ಘಟಕ ಅಧ್ಯಕ್ಷ ಚಳುವಳಿ ನಾಗೇಶ್, ಜಿ.ಕೆ. ಗೋಪಾಲ್, ಕೆಂಚಯ್ಯ, ರಘು ಹಾಗೂ ರಾಜ್ಯ ಸಮಿತಿ, ಜಿಲ್ಲಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು.































