Home ಜಿಲ್ಲೆ ಬೆಂಗಳೂರು ಅಸೆಂಟ್ಸ್ ಲಿಫ್ಟ್ಸ್ ಆಂಡ್ ಎಸ್ಕಲೇಟರ್ಸ್‍ನ ನವೀನ ತಂತ್ರಜ್ಞಾನ ಪ್ರದರ್ಶನ

ಅಸೆಂಟ್ಸ್ ಲಿಫ್ಟ್ಸ್ ಆಂಡ್ ಎಸ್ಕಲೇಟರ್ಸ್‍ನ ನವೀನ ತಂತ್ರಜ್ಞಾನ ಪ್ರದರ್ಶನ

ಬೆಂಗಳೂರು, ಅ11; ಕಟ್ಟಡ ನಿರ್ಮಾಣ, ವಾಸ್ತುಶಿಲ್ಪ, ಒಳಾಂಗಣ ವಿನ್ಯಾಸ ಹಾಗೂ ಕಟ್ಟಡ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಪ್ರದರ್ಶನವಾದ ಎಸಿಇ ಟೆಕ್ ಬೆಂಗಳೂರು 2026ರಲ್ಲಿ ಅಸೆಂಟ್ಸ್ ಲಿಫ್ಟ್ಸ್ ಆಂಡ್ ಎಸ್ಕಲೇಟರ್ಸ್ ಸಂಸ್ಥೆಯು ತನ್ನ ಅತ್ಯಾಧುನಿಕ ಲಿಫ್ಟ್ ತಂತ್ರಜ್ಞಾನ ಮತ್ತು ನವೀನ ಲಂಬ ಸಾರಿಗೆ ಪರಿಹಾರಗಳನ್ನು ಪ್ರದರ್ಶಿಸುತ್ತಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಈ ಪ್ರದರ್ಶನದಲ್ಲಿ ಸಂಸ್ಥೆಯು ವಿಶೇಷ ಗಮನ ಸೆಳೆಯುತ್ತಿದೆ.


ಪ್ರದರ್ಶನದ ಹಾಲ್ 2ರ ಸಿ-14 ಮಳಿಗೆಯನ್ನು ಆನಂದ್ ಗ್ರೂಪ್‍ನ ವ್ಯವಸ್ಥಾಪಕ ನಿರ್ದೇಶಕ ಆರ್. ಆನಂದ್, ಶಾಂಗ್ರಿಲಾ ಇನ್‍ಫ್ರಾಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷ ಸೀನಯ್ಯ ಬೊಲ್ಲಿನೇನಿ ಹಾಗೂ ವಿಜಿಎನ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ. ಎನ್. ದೇವದಾಸ್ ಉದ್ಘಾಟಿಸಿದರು.
ಅಸೆಂಟ್ಸ್, ಆರ್ವೆ ಸೋಲಾರ್ ಮತ್ತು ಸೂರ್ಯ ಎಲಿವೇಟರ್ಸ್‍ನ ಅಧ್ಯಕ್ಷ ಅರುಣ್ ಕೊವೂರು, ಅಸೆಂಟ್ಸ್‍ನ ಕಾರ್ಯನಿರ್ವಾಹಕ ನಿರ್ದೇಶಕಿ ಅಂಕಿತಾ ಕೊವೂರು ಹಾಗೂ ಆರ್ವೆ ಸೋಲಾರ್‍ನ ಕಾರ್ಯನಿರ್ವಾಹಕ ನಿರ್ದೇಶಕ ವಿಘ್ನೇಶ್ ಕೊವೂರು ಉಪಸ್ಥಿತರಿದ್ದರು.


ಸುರಕ್ಷತೆ, ಗುಣಮಟ್ಟ, ಆಧುನಿಕ ವಿನ್ಯಾಸ ಮತ್ತು ವಿಶ್ವಾಸಾರ್ಹ ಸೇವೆಗೆ ಆದ್ಯತೆ ನೀಡುವ ಮೂಲಕ ಗ್ರಾಹಕರ ಅಗತ್ಯಗಳಿಗೆ ತಕ್ಕ ಪರಿಹಾರಗಳನ್ನು ಒದಗಿಸುವ ಸಂಸ್ಥೆಯ ಪ್ರಯತ್ನವನ್ನು ಗಣ್ಯರು ಶ್ಲಾಘಿಸಿದರು. ಪ್ರದರ್ಶನದಲ್ಲಿ ನೇರವಾಗಿ ಲಿಫ್ಟ್ ಕಾರ್ಯನಿರ್ವಹಣೆಯನ್ನು ವೀಕ್ಷಿಸುವ ಅವಕಾಶ ಕಲ್ಪಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ. ಇದರಿಂದ ವಾಸ್ತುಶಿಲ್ಪಿಗಳು, ಕಟ್ಟಡ ನಿರ್ಮಾಣಕಾರರು, ರಿಯಲ್ ಎಸ್ಟೇಟ್ ಅಭಿವೃದ್ಧಿದಾರರು ಹಾಗೂ ಸಾರ್ವಜನಿಕರು ಲಿಫ್ಟ್ ತಂತ್ರಜ್ಞಾನವನ್ನು ಹತ್ತಿರದಿಂದ ಅರಿಯಬಹುದಾಗಿದೆ.


ಈ ಸಂದರ್ಭದಲ್ಲಿ ಮಾತನಾಡಿದ ಆರ್ವೆ ಸೋಲಾರ್‍ನ ಕಾರ್ಯನಿರ್ವಾಹಕ ನಿರ್ದೇಶಕ ವಿಘ್ನೇಶ್ ಕೊವೂರು, ಆಧುನಿಕ ಕಟ್ಟಡಗಳ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ನವೀನ ತಂತ್ರಜ್ಞಾನದ ಜೊತೆಗೆ ಸುಸ್ಥಿರ ಇಂಧನ ಪರಿಹಾರಗಳನ್ನು ಅಳವಡಿಸಿಕೊಳ್ಳು