Home ಜಿಲ್ಲೆ ಮೈಸೂರು ಅವಧಿ ಮೀರಿದ 39 ಲಕ್ಷ ಮೌಲ್ಯದ ಬಿಯರ್ ನಾಶ

ಅವಧಿ ಮೀರಿದ 39 ಲಕ್ಷ ಮೌಲ್ಯದ ಬಿಯರ್ ನಾಶ

ಸಂಜೆವಾಣಿ ನ್ಯೂಸ್
ಮೈಸೂರು, ಸೆ.30:-
ಮೈಸೂರು ನಗರದ ಕೂರ್ಗಳ್ಳಿಯಲ್ಲಿರುವ ಕೆ.ಎಸ್.ಬಿ.ಸಿ.ಎಲ್ ಲಿಕ್ಕರ್ ಡಿಪೆÇೀ ಮೈಸೂರು-1 ಮತ್ತು ಮೈಸೂರು-2 ರಲ್ಲಿ ಸಂಗ್ರಹವಿದ್ದ ಅವಧಿ ಮೀರಿದ ವಿವಿಧ ಬ್ರಾಂಡ್‍ಗಳ ಬಿಯರ್ ಅನ್ನು ಅಬಕಾರಿ ಇಲಾಖೆ ನಾಶಪಡಿಸಿದೆ.


ಮೈಸೂರು ನಗರ ಜಿಲ್ಲೆ ಉಪ ಆಯುಕ್ತರಾದ ವಿವೇಕ್.ಜಿ. ಅಬಕಾರಿ ಅವರ ಆದೇಶದ ಮೇರೆಗೆ, ಅಬಕಾರಿ ಉಪ ಅಧೀಕ್ಷಕರಾದ ವಿಕ್ರಮ್.ಎಲ್.ಬಿ. ಅಬಕಾರಿ ಮತ್ತು ಕೆ.ಎಸ್.ಬಿ.ಸಿ.ಎಲ್ ಲಿಕ್ಕರ್ ಡಿಪೆÇೀ ಹಾಗೂ ಅಬಕಾರಿ ಉಪ ಅಧೀಕ್ಷಕರು, ಮೈಸೂರು ಉಪ ವಿಭಾಗದವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಒಟ್ಟು 1927 ಬಾಕ್ಸ್‍ಗಳ (17956.78 ಲೀಟರ್) ಬಿಯರ್ ನಾಶಪಡಿಸಲಾಗಿದ್ದು, ಇದರ ಒಟ್ಟು ಮೌಲ್ಯ 39.44 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಸಂದರ್ಭದಲ್ಲಿ ಕೆ.ಎಸ್.ಬಿ.ಸಿ.ಎಲ್ ಮೈಸೂರು-1 ಡಿಪೆÇೀದ ಮಳಿಗೆ ವ್ಯವಸ್ಥಾಪಕ ಡಿ.ಕೆ. ವೆಂಕಟೇಶ್, ಮೈಸೂರು-2 ಡಿಪೆÇೀದ ವ್ಯವಸ್ಥಾಪಕ ಯೋಗೇಶ್.ಎಂ.ಆರ್, ಡಿಪೆÇೀ-1ರ ಅಬಕಾರಿ ನಿರೀಕ್ಷಕಿ ನಂದಿತ ಹಳದನಕರ್, ಡಿಪೆÇೀ-2ರ ಅಬಕಾರಿ ನಿರೀಕ್ಷಕಿ ರಾಧಾ.ಎಸ್.ಪಿ, ಮೈಸೂರು ವಲಯ-2ರ ಅಬಕಾರಿ ಉಪ ನಿರೀಕ್ಷಕರಾದ ಚಂದ್ರಶೇಖರ್ ಮತ್ತು ರಾಘವೇಂದ್ರ ಅಪುರಾ, ಇತರೇ ಅಬಕಾರಿ ಸಿಬ್ಬಂದಿ ಹಾಗೂ ಡಿಪೆÇೀ ಸಿಬ್ಬಂದಿ ಉಪಸ್ಥಿತರಿದ್ದರು.