Home ಜಿಲ್ಲೆ ಮೈಸೂರು ಮಾವುತ-ಕಾವಾಡಿಗಳಿಗೆ ಒಬ್ಬಟ್ಟು ಉಪಹಾರ

ಮಾವುತ-ಕಾವಾಡಿಗಳಿಗೆ ಒಬ್ಬಟ್ಟು ಉಪಹಾರ

ಸಂಜೆವಾಣಿ ನ್ಯೂಸ್
ಮೈಸೂರು, ಸೆ.28:-
ಮೈಸೂರು ಅರಮನೆ ಆವರಣದಲ್ಲಿ ಇಂದು ಬೆಳಿಗ್ಗೆ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗಳಿಗೆ ವಿಶೇಷ ಉಪಹಾರ ಕೂಟ ಆಯೋಜಿಸಲಾಗಿತ್ತು.

ದಸರಾ ಆನೆಗಳೊಂದಿಗೆ ಆಗಮಿಸಿರುವ ಮಾವುತ, ಕಾವಾಡಿ ಕುಟುಂಬಗಳಿಗೆ ಬಾಳೆ ಎಲೆಯ ಮೇಲೆ ಒಬ್ಬಟ್ಟು,
ವಡೆ ಸಹಿತ ಉಪಹಾರವನ್ನು ಬಡಿಸಲಾಯಿತು. ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಖುದ್ದು ತಟ್ಟೆ ಹಿಡಿದು ಮಾವುತರಿಗೆ ಒಬ್ಬಟ್ಟು ಬಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ತಿಮ್ಮಯ್ಯ, ಜಿಲ್ಲಾಧಿಕಾರಿ, ನಗರ ಪೆÇಲೀಸ್ ಆಯುಕ್ತರು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ಡಿಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ ಮಾವುತರು ಮತ್ತು ಕಾವಾಡಿಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.