
ನೆಲಮಂಗಲ. 14:ಯೂನಿವರ್ಸ್ ಕಲ್ಚರ್ ಅಂಡ್ ಎಜುಕೇಷನ್ ಪೆÇ್ರಟೆಕ್ಷನ್ ಕಮಿಷನ್ ಇಂಡಿಯಾ’ ಸಂಸ್ಥೆಯ ವತಿಯಿಂದ ನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮಾಚೋನಾಯಕನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಮೈಲನಹಳ್ಳಿ ಮಲ್ಲಿಕಾರ್ಜುನಯ್ಯ ಎಂ. ಆರ್. ಅವರಿಗೆ ‘ಗೌರವ ಡಾಕ್ಟರೇಟ್’ ಪದವಿ ನೀಡಿ ಗೌರವಿಸಲಾಗಿದೆ.
ಗೌರವ ಪದವಿ ಸ್ವೀಕರಿಸಿ ಮಾತನಾಡಿದ ಎಂ. ಆರ್. ಮಲ್ಲಿಕಾರ್ಜುನಯ್ಯ ಅವರು ಕಳೆದ 38 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಜೊತೆಗೆ ಕಲೆ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ಲಭಿಸಿರುವುದು ಮತ್ತಷ್ಟು ಉತ್ತಮ ಸೇವೆಗೆ ಉತ್ತೇಜನ ದೊರೆತಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸದರಿ ಶಿಕ್ಷಕರ ಸಾಧನೆಯನ್ನು ಮೆಚ್ಚಿದ ಹಲವು ಮುಖಂಡರು, ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನೂರಾರು ಶಿಕ್ಷಕರು ಮತ್ತು ಹಲವು ವಿದ್ಯಾರ್ಥಿ ಮಿತ್ರರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಸಂದರ್ಭದಲ್ಲಿ ಕೌನ್ಸಿಲ್ ಸದಸ್ಯೆ ಹಾಗೂ ಹಿರಿಯ ವಕೀಲರಾದ ಡಾ. ವೀಣಾ ರಾವ್, ಡಾ. ಮಲ್ಲಿಕಾರ್ಜುನ ಬೃಂಗೀಮಠ್, ನಿ. ಪೆÇೀಲೀಸ್ ಅಧಿಕಾರಿ ಡಾ. ರವೀಂದ್ರನಾಥ್, ಡಾ. ಚಂದ್ರಶೇಖರ. ಎಂ, ಡಾ. ಅಶೋಕ್ ಕಾಳೆ ಮತ್ತಿತರರು ಉಪಸ್ಥಿತರಿದ್ದರು.























