Home ಜಿಲ್ಲೆ ಮೈಸೂರು ಜಂಬೂಸವಾರಿಯಷ್ಟೇ ಕುಸ್ತಿಯೂ ದಸರಾದ ಪ್ರಮುಖ ಆಕರ್ಷಣೆ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಜಂಬೂಸವಾರಿಯಷ್ಟೇ ಕುಸ್ತಿಯೂ ದಸರಾದ ಪ್ರಮುಖ ಆಕರ್ಷಣೆ: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಸಂಜೆವಾಣಿ ನ್ಯೂಸ್
ಮೈಸೂರು, ಅ.05:
ದಸರಾದ ಜಂಬೂಸವಾರಿ ಎಷ್ಟು ಪ್ರಸಿದ್ಧಿಯೋ, ದಸರಾ ಕುಸ್ತಿಯೂ ಅಷ್ಟೇ ಪ್ರಸಿದ್ಧಿ ಪಡೆದಿದೆ. ಇದು ನಮ್ಮ ನೆಲದ ದೇಸಿ ಕ್ರೀಡೆ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಬಣ್ಣಿಸಿದರು.
ನಗರದ ಡಿ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಉಪಸಮಿತಿ ವತಿಯಿಂದ ಆಯೋಜಿಸಿದ್ದ ದಸರಾ ಕುಸ್ತಿ ಪಂದ್ಯಾವಳಿಯ ಜೋಡಿ ಕಟ್ಟುವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಪೆÇೀಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ದಸರಾ ಕುಸ್ತಿ ಪಂದ್ಯಾವಳಿ ರಾಜರ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ನಮ್ಮ ಸರ್ಕಾರ ಈ ಪಂದ್ಯಾವಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಲಿದೆ ಎಂದರು.


ದಸರಾ ಕುಸ್ತಿಯನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಜನರು ಬರುತ್ತಾರೆ, ಅಷ್ಟು ಹೆಸರುವಾಸಿಯಾಗಿದೆ. ಏಳು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯದ ಎಲ್ಲಾ ಕುಸ್ತಿಪಟುಗಳಿಗೆ ಕುಸ್ತಿ ಸಮಿತಿ ವತಿಯಿಂದ ಉತ್ತಮ ವ್ಯವಸ್ಥೆ ಮಾಡಲಾಗಿದೆ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಅ.11 ರಿಂದ 17 ರವರೆಗೆ ಕುಸ್ತಿ ಪಂದ್ಯಾವಳಿ:ಈ ಬಾರಿಯ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 11 ರಿಂದ 17 ರವರೆಗೆ ಡಿ. ದೇವರಾಜ ಅರಸು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಅ.11 ರಂದು ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.


ಈ ಬಾರಿ ನಾಡಕುಸ್ತಿ, ಪಾಯಿಂಟ್ ಕುಸ್ತಿ ಮತ್ತು ಪಂಜ ಕುಸ್ತಿ ಎಂಬ ಮೂರು ವಿಧದ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಜಿಲ್ಲಾ ಪೆÇಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾ ಪೆÇಲೀಸ್ ಅಧೀಕ್ಷಕ ಹಾಗೂ ಕುಸ್ತಿ ಉಪಸಮಿತಿ ವಿಶೇಷಾಧಿಕಾರಿ ಎಲ್. ನಾಗೇಶ್, ಕುಸ್ತಿ ಉಪಸಮಿತಿ ಕಾರ್ಯದರ್ಶಿ ನರಸಿಂಹಮೂರ್ತಿ, ಕಾರ್ಯಾಧ್ಯಕ್ಷ ಧರ್ಮೇಂದ್ರ ಹಾಗೂ ಹಲವು ಪೈಲ್ವಾನ್‍ಗಳು ಉಪಸ್ಥಿತರಿದ್ದರು.