Home ಜಿಲ್ಲೆ ಸರ್ಕಾರಿ ಡೆಂಟಲ್ ಕಾಲೇಜಿನಿಂದ ಬಾಯಿ ಸ್ವಚ್ಚತಾ ದಿನ

ಸರ್ಕಾರಿ ಡೆಂಟಲ್ ಕಾಲೇಜಿನಿಂದ ಬಾಯಿ ಸ್ವಚ್ಚತಾ ದಿನ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಆ.02: ನಗರದ ಬಿಎಂಸಿಆರ್ಸಿ ಆವರಣದಲ್ಲಿರುವ ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪಿರಿಯೊಡಾಂಟಿಕ್ಸ್ ವಿಭಾಗವು. ನಿನ್ನೆ ‘ಬಾಯಿ ಸ್ವಚ್ಛತಾ ದಿನ’ವನ್ನು ಆಚರಿಸಿತು.

ಈ ಸಂದರ್ಭದಲ್ಲಿ ಪಿರಿಯೊಡಾಂಟಲ್ ಸೋಂಕಿತ ಹಲ್ಲುಗಳಲ್ಲಿ ಇಂಪ್ಲಾಂಟ್ಗಳು” ಎಂಬ ವಿಷಯದ ಕುರಿತು ‘ನಿರಂತರ ದಂತ ವೈದ್ಯಕೀಯ ಶಿಕ್ಷಣ’ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬಿಎಂಸಿಆರ್ಸಿ ನಿರ್ದೇಶಕ ಡಾ. ಟಿ. ಗಂಗಾಧರ್ ಗೌಡ, ದಂತ ಕಾಲೇಜಿನ

ಪ್ರಾಂಶುಪಾಲೆ ಡಾ. ಭಾರತಿ ಎಸ್.ಎಚ್., ಬಿಎಂಸಿಆರ್ಸಿ ಪ್ರಾಂಶುಪಾಲ ಡಾ. ಎಂ. ಮಲ್ಲಿಕಾರ್ಜುನ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಇಂದುಮತಿ ಅವರು ಒಸಡು ರೋಗ ತಜ್ಞ ಆಗಿದ್ದ ಡಾ. ಶಂಕ್ವಾಲ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಡಾ. ಟಿ. ಗಂಗಾಧರ್ ಗೌಡ ದಂತ ವೈದ್ಯಕೀಯ ಕ್ಷೇತ್ರದಲ್ಲಿನ ಬೆಳವಣಿಗೆಗಳು ಮತ್ತು ಹಲ್ಲುಗಳನ್ನು ಉಳಿಸುವ ವಿವಿಧ ಚಿಕಿತ್ಸಾ ವಿಧಾನಗಳ ಕುರಿತು ಮಾತನಾಡಿದರು. ಸಾರ್ವಜನಿಕರಲ್ಲಿ ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಶ್ರಮಿಸುತ್ತಿದೆಂದು ತಿಳಿಸಿದರು,

ಕರ್ನಾಟಕ ರಾಜ್ಯ ದಂತ ವೈದ್ಯಕೀಯ ಮಂಡಳಿಯ ರಿಜಿಸ್ಟ್ರಾರ್ ಹಾಗೂ ಬೆಂಗಳೂರಿನ ಎನ್ಎಸ್ವಿಕೆ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ವಿ. ರಂಗನಾಥ್ ಮುಖ್ಯ ಅತಿಥಿಗಳಾಗಿದ್ದರು. ಬೆಂಗಳೂರಿನ

ದಂತ ಇಂಪ್ಲಾಂಟ್ ತಜ್ಞ ಡಾ. ವೀರೇಂದ್ರ ಕುಮಾರ್ ವಿಶೇಷ ಉಪನ್ಯಾಸ ನೀಡಿದರು. ಆರ್ಜಿಯುಎಚ್ಎಸ್ ಬೆಂಗಳೂರಿನ ಉಪ ನಿರ್ದೇಶಕ ಡಾ. ಮಂಜುನಾಥ್ ರೆಡ್ಡಿ ಬಿ. ಮತ್ತು ಜಿಡಿಸಿಆರ್ಐ ಬಳ್ಳಾರಿಯ ಮಾಜಿ ಪ್ರಾಂಶುಪಾಲ ಡಾ. ದಿವಾಕರ್ ಉಪಸ್ಥಿತರಿದ್ದರು. ಡಾ. ಹನುಮಂತ ಕುಮಾರ್ ಕೆ., ಡಾ. ಸದಾನಂದ ಕೆ., ಡಾ. ರಾಧಿಕಾ ಕೆ.ಬಿ., ಡಾ. ಶ್ವೇತಾ ವಿ. ಜಲ್ಲಿ, ಡಾ. ಮೊಹಮ್ಮದ್ ಇಸ್ಮಾಯಿಲ್ ಮತ್ತು ಜಿಡಿಸಿಆರ್ಐ ಬಳ್ಳಾರಿಯ ಪಿರಿಯೊಡಾಂಟಿಕ್ಸ್ ವಿಭಾಗದ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು