
ಮಂಗಳೂರು-ಆಳ ಸಮುದ್ರ ಮೀನುಗಾರಿಕೆಗೆ ನಗರದ ಹೊರವಲಯದ ಉಳ್ಳಾಲದಿಂದ ತೆರಳಿದ್ದ ಬೋಟ್ ವೊಂದು ಶನಿವಾರ ಸಂಜೆ ಅಳಿವೆ ಬಾಗಿಲಿನಲ್ಲಿ ನಡೆದಿದೆ. ಈ ವೇಳೆ ಬೋಟ್ ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಇಬ್ರಾಹಿಂ ಖಲೀಲ್ ಮಾಲೀಕತ್ವದ ‘ಆಯಾನ್ ಹೆಸರಿನ ಬೋಟ್ ಮೀನುಗಾರಿಕೆ ಮುಗಿಸಿ ದಡಕ್ಕೆ ವಾಪಸ್ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮೀನುಗಾರಿಕಾ ಇಲಾಖೆ ಅಧಿಕಾರಿಗಳ ಪ್ರಕಾರ, ಬೋಟ್ ನ ತಳಭಾಗ ಬಂಡೆಗೆ ಬಡಿದು ಒಡೆದಿದ್ದು, ಪರಿಣಾಮ ಬೋಟ್ ಒಳಗೆ ವೇಗವಾಗಿ ನೀರು ನುಗ್ಗಿ ಮುಳುಗಿದೆ
ಬೋಟ್ ಮುಳುಗುತ್ತಿರುವುದನ್ನು ಗಮನಿಸಿದ ಸಮೀಪದಲ್ಲಿದ್ದ ಇತರ ಬೋಟ್ ಗಳಲ್ಲಿನ ಮೀನುಗಾರರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಅವರು ಬೋಟ್ ನಲ್ಲಿದ್ದ ಎಲ್ಲಾ ಆರು ಮಂದಿ ಮೀನುಗಾರರನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

































