
ಸಂಜೆವಾಣಿ ವಾರ್ತೆ
ಕೆ ಆರ್ ನಗರ, ಸೆ.05:-ಸಿದ್ದಗಂಗಾ ಸ್ವಾಮೀಜಿ ಯವರನ್ನು ಬಸವ ಬಳಗಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಮಾಜದಮುಖಂಡರು ಶ್ರೀ ಮಠದಲ್ಲಿ ಭೇಟಿಮಾಡಿ ಬಸವಜಯಂತಿಯ ದಿವ್ಯ ಸಾನಿಧ್ಯವಹಿಸಲು ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀಗಳು ಅ.28ಕ್ಕೆ ಜರುಗಲಿರುವ ಬಸವಜಯಂತಿಯಲ್ಲಿ ದಿವ್ಯ ಸಾನಿಧ್ಯವಹಿಸಲು ಸಮ್ಮತಿಗೆ ಸೂಚಿಸಿದರು.
ಪ್ರತಿ ವರ್ಷವೂ ಅತ್ಯಂತವಾಗಿ ಬಸವಜಯಂತಿ ಯಶಸ್ವಿಯಾಗಿ ಆಚರಿಸಿಕೊಂಡು, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದನೆ ಸಲ್ಲಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ನಿಮಗೆಲ್ಲರಿಗೂ ಶುಭವಾಗಲಿ. ಮುಂದೆಯೂ ಹೀಗೆಯೇ ಒಗ್ಗಟ್ಟಾಗಿ ಸಮಾಜಕಟ್ಟುವ ಎಲ್ಲಾ ಸಮಾಜದವರ ವಿಶ್ವಾಸಗಳಿಸಿ ಇವನಾರವ ಇವನಾರವ ಎಂದೆನಿಸಿದೆ ಇವನಮ್ಮವ ಎಂದೆನಿಸಿ ಬಸವಣ್ಣನವರ ಕಾಯಕ ದಾಸೋಹ ವನ್ನು ಪ್ರಚಾರ ಪಡಿಸುವಂತೆ ತಿಳಿಸಿದರು.
2026ನೇ ಸಾಲಿನ ಬಸವ ಜಯಂತಿ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಲಾಲನಹಳ್ಳಿ ಮಹೇಶ್ ಮಾತನಾಡಿ ಬಸವಜಯಂತಿ ಕಾರ್ಯಕ್ರಮ ನಡೆಸಲು ಶ್ರೀಗಳ ಸಮ್ಮತಿ ದೊರೆತಿರುವುದು ಸಂತಸದ ಸಂಗತಿ. ಎಲ್ಲರ ವಿಶ್ವಾಸಗಳಿಸಿ ಸಹಕಾರ ದೊಂದಿಗೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆಡೆಸಲಾಗುವುದು ಎಂದರು.
ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್ ಮಾತನಾಡಿ, ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಹಾಗೂ ಮಾನವೀಯತೆಯ ಸಂದೇಶಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಲಿವೆ ಎಂದು ಹೇಳಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ ಲಾಲನಹಳ್ಳಿ ರವಿಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ಸಾಲಿಗ್ರಾಮ ತಾಲೊಕು ಅಧ್ಯಕ್ಷ ಕೆಡಗ ನಟರಾಜ್, ಸಮಾಜದ ಮುಖಂಡರಾದ ಚಂದ್ರಶೇಖರ್, ಸಣ್ಣಲಿಂಗಪ್ಪ ಕೆಂಪರಾಜು ಇಂಜಿನಿಯರ್ ಎಸ್ ವಿ ಪ್ರಕಾಶ್ ಮಲ್ಲಪ್ಪ,ಗಡ್ಡಾ ಮಹೇಶ್, ನಿಶಾಂತ್ ಜ್ಞಾನನಂದ್ ಅರ್ಜುನಳ್ಳಿಮಹದೇವ್,ಮನೋಹರಿನಾಗರಾಜ್,ಹೆಚ್ ಡಿ ರಾಣಿ, ಉಮಾಶಂಕರ್ ಗುಂಡಾ, ಯತಿರಾಜ್, ಸರಗೂರು ಶಿವು, ಪಶುಪತಿ ಜಗದೀಶ್, ನಟರಾಜ್ ,ಚಂದ್ರಶೇಖರ್, ಸದಾಶಿವಮೂರ್ತಿ, ಮಂಜುನಾಥ್, ಪವನ್. ಮುಂತಾದವರು ಉಪಸ್ಥಿತರಿದ್ದರು.

























