
ಪ್ಯಾರಿಸ್, ಅ.22-ಫ್ರಾನ್ಸ್ನಲ್ಲಿ ಇತ್ತೀಚಿನ ಬೆಳವಣಿಗೆಗಳು ಮತ್ತು ಕೆಲವು ಪ್ರದೇಶಗಳಲ್ಲಿ ಕಫ್ರ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯರು ಹಾಗೂ ಫ್ರಾನ್ಸ್ಗೆ ತೆರಳುವವರಿಗೆ ಪ್ಯಾರಿಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸುರಕ್ಷತಾ ಸಲಹೆ ನೀಡಿದೆ.
ಫ್ರಾನ್ಸ್ನಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಭಾರತೀಯರು ಎಚ್ಚರಿಕೆಯಿಂದ ಇರಬೇಕು. ಜನಸಂದಣಿ ಇರುವ ಸ್ಥಳಗಳು ಹಾಗೂ ದೊಡ್ಡ ಸಭೆಗಳಿಂದ ದೂರವಿರಬೇಕು ಎಂದು ರಾಯಭಾರ ಕಚೇರಿ ತನ್ನ ಎಕ್ಸ್ ಖಾತೆಯ ಪೆÇೀಸ್ಟ್ನಲ್ಲಿ ತಿಳಿಸಿದೆ.
ಸ್ಥಳೀಯ ಅಧಿಕಾರಿಗಳು ನೀಡುವ ಸೂಚನೆಗಳು ಮತ್ತು ಸುರಕ್ಷತಾ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಭಾರತೀಯರಿಗೆ ಸೂಚಿಸಲಾಗಿದೆ. ಪ್ರತಿಭಟನೆಗಳ ಪರಿಣಾಮವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿರುವುದರಿಂದ, ಪ್ರಯಾಣಿಕರು ಸಾರಿಗೆ ಸೇವೆಗಳ ಇತ್ತೀಚಿನ ಮಾಹಿತಿಯನ್ನೂ ಗಮನಿಸುತ್ತಿರಬೇಕು ಎಂದು ಸಲಹೆ ನೀಡಲಾಗಿದೆ.
ಜೀವನ ವೆಚ್ಚ ಹೆಚ್ಚಳದ ವಿರುದ್ಧ ಇಟಲಿಯ ವಿವಿಧ ನಗರಗಳಲ್ಲಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯರಿಗೂ ಭಾರತೀಯ ರಾಯಭಾರ ಕಚೇರಿ ಸುರಕ್ಷತಾ ಸಲಹೆ ನೀಡಿತ್ತು.
ಪ್ರತಿಭಟನೆಗಳು ನಡೆಯುವ ಸ್ಥಳಗಳು ಹಾಗೂ ಜನಸಂದಣಿ ಇರುವ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಬೇಕು. ಸ್ಥಳೀಯ ಸುದ್ದಿಗಳನ್ನು ಗಮನಿಸುತ್ತಾ, ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಇಟಲಿಯಲ್ಲಿರುವ ಭಾರತೀಯರಿಗೆ ಸೋಮವಾರ ಹೊರಡಿಸಿದ ಸಲಹೆಯಲ್ಲಿ ತಿಳಿಸಲಾಗಿತ್ತು.
























