Home Uncategorized ವಿದ್ಯಾರ್ಥಿಗೆ ಸನ್ಮಾನ

ವಿದ್ಯಾರ್ಥಿಗೆ ಸನ್ಮಾನ

ಬಾದಾಮಿ,ಅ೧೮: ಚೆಸ್ ಎಂಬುದು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕ್ರೀಡೆಯಾಗಿದ್ದು, ಅಧ್ಯಯನದ ಜೊತೆಗೆ ಈ ಕ್ರೀಡೆಯಲ್ಲಿ ಯಶಸ್ಸನ್ನು ಸಾಧಿಸಬೇಕು ರಾಜ್ಯ ಮಟ್ಟದಿಂದ ರಾಷ್ಟçಮಟ್ಟಕ್ಕೆ ಆಯ್ಕೆಯಾದರೆ ಸಂಸ್ಥೆಯು ಸಂಪೂರ್ಣ ಉಚಿತವಾದ ಶಿಕ್ಷಣವನ್ನು ನೀಡಲಾಗುವುದು ಎಂದು ಶ್ರೀ ವೀರ ಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಕಾರ್ಯಾಧ್ಯಕ್ಷ ಎ.ಸಿ. ಪಟ್ಟಣದ ಹೇಳಿದರು.


ಅವರು ಸಂಸ್ಥೆಯಲ್ಲಿ ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶ್ರೀ ಜಿ.ಎಂ.ಕೆ. ಪದವಿ ಪೂರ್ವ ಮಹಾವಿದ್ಯಾಲಯ(ಪ್ರೌಢಶಾಲಾ ವಿಭಾಗ)ಬಾದಾಮಿಯ ವಿದ್ಯಾರ್ಥಿ ಕುಮಾರ ಗಣೇಶ ಅಶೋಕ ಹಲಗೇರಿ ಈತನಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಹಾಗೂ ಶಾಲಾ ಸುಧಾರಣಾ ಸಮಿತಿಯ ಚೇರ್ಮನ ಚಂದ್ರು ಎಸ್. ಕಾಚಟ್ಟಿ, ಶಾಲಾ ಸುಧಾರಣಾ ಸಮಿತಿಯ ಸರ್ವ ಸದಸ್ಯರು ಪ್ರಭಾರ ಉಪ ಪ್ರಾಚಾರ್ಯ ಐ.ಕೆ.ಕಟಗೇರಿ ಹಿರಿಯ ಶಿಕ್ಷಕ ಬಿ.ಎಲ್.ಹೂಲಿ ಹಾಗೂ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.