ಕಲಬುರಗಿ: ಎಸ್‍ಐಆರ್ ರದ್ದುಪಡಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ಕಲಬುರಗಿ ಘಟಕದ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಮಹೇಶ್ ಎಸ್.ಬಿ., ಭೀಮಾಶಂಕರ ಮಾಡಿಯಾಳ್, ಶರಣಬಸಪ್ಪ ಮಮಶೆಟ್ಟಿ, ಸೈಬಣ್ಣ ಗುಡುಬಾ, ಮೌಲಾ ಮುಲ್ಲಾ, ಅರ್ಜುನ್ ಭದ್ರೆ, ಮರಿಯಪ್ಪ ಹಳ್ಳಿ, ಉಮಾಪತಿ ಪಾಟೀಲ, ಭೀಮಶೆಟ್ಟಿ ಯಂಪಳ್ಳಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.