
ಕಲಬುರಗಿ,ಅ.23-ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಕ್ಷೇತ್ರದಾದ್ಯಂತ ಬೆಳಿಗ್ಗೆ 10 ಗಂಟೆ ವರೆಗೆ 34,784 ಮತದಾರರ ಪೈಕಿ 2,960 ಪುರುಷ ಮತ್ತು 1,740 ಮಹಿಳೆ ಸೇರಿ ಒಟ್ಟು 4,700 (ಶೇ.13.51) ಮತದಾರರು ಮತದ ಹಕ್ಕು ಚಲಾಯಿಸಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ. ಅವರು ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆ ಮತಗಟ್ಟೆ ಸಂಖ್ಯೆ 65ಕ್ಕೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.
ನಗರದ ಸೂಪರ್ ಮಾರ್ಕೆಟ್ ಪ್ರದೇಶದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು (ಎಂ.ಪಿ.ಎಚ್.ಎಸ್ ) ಮತಗಟ್ಟೆ ಸಂ.64ರಲ್ಲಿ ಬೆಳಿಗ್ಗೆ 10.10 ಗಂಟೆ ಹೊತ್ತಿಗೆ 533 ಮತದಾರರ ಪೈಕಿ 38 ಪುರುಷ ಮತ್ತು 49 ಮಹಿಳೆ ಸೇರಿ ಒಟ್ಟು 87 ಜನ ಮತದ ಹಕ್ಕು ಚಲಾಯಿಸಿದ್ದಾರೆ. ಕಲಬುರಗಿ ನಗರದ ನೆಹರು ಗಂಜ್ ನಗರೇಶ್ವರ ಪ್ರೌಢ ಶಾಲೆ ಮತಗಟ್ಟೆ ಸಂ.65 ರಲ್ಲಿ ಬೆಳಿಗ್ಗೆ 10.30 ಗಂಟೆ ಹೊತ್ತಿಗೆ 819 ಮತದಾರರ ಪೈಕಿ 99 ಮಹಿಳೆಯರು 55 ಪುರುಷ ಸೇರಿ ಒಟ್ಟು 154 ಜನ ಮತದ ಹಕ್ಕು ಚಲಾಯಿಸಿದ್ದಾರೆ.
ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ನಗರದ ಎನ್.ವಿ. ಕನ್ಯಾ ಪ್ರೌಢ ಶಾಲೆ ಬಲ ಭಾಗ ಮತಗಟ್ಟೆ ಸಂಖ್ಯೆ 62 ಮತ್ತು ಎಡ ಭಾಗ ಮತಗಟ್ಟೆ ಸಂ.63ಕ್ಕೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.
ನಗರದ ನೆಹರು ಗಂಜ್ ನಗರೇಶ್ವರ ಪ್ರೌಢ ಶಾಲೆ ಮತಗಟ್ಟೆ ಸಂ.65 ರಲ್ಲಿ ಶುಕ್ಲಾ ಶಾಲೆಯ ಶಿಕ್ಷಕಿ ಪ್ರಿಯಾಂಕಾ ಅವರು ಪ್ರಥಮ ಬಾರಿಗೆ ಮತ ಚಲಾಯಿಸಿದರು.
ನಗರೇಶ್ವರ ಶಾಲೆ ಮತಗಟ್ಟೆಯಲ್ಲಿ ಬಿರುಸಿನ ಮತದಾನ ನಡೆದಿದ್ದು, ಬೆಳಿಗ್ಗೆ 10.20 ಕ್ಕೆ 819ರಲ್ಲಿ 154 ಜನ ಮತ ಚಲಾಯಿಸಿದ್ದು, ಶೇ.18ರಷ್ಟು ಮತದಾನವಾಗಿದೆ. ಮತ ಚಲಾವಣೆಗೆ ಲಾಂಗ್ ಕ್ಯೂ ನಲ್ಲಿ ನಿಂತ ಮತದಾರರು ತಮ್ಮ ಹಕ್ಕು ಚಲಾಯಿಸಿದರು.






















