Home ಜಿಲ್ಲೆ ಕಲಬುರಗಿ ರೌಡಿಶೀಟರ್ ಬಾಂಬೆ ಅಸ್ಲಂ ಗೂಂಡಾ ಕಾಯ್ದೆಯಡಿ ಬಂಧನ

ರೌಡಿಶೀಟರ್ ಬಾಂಬೆ ಅಸ್ಲಂ ಗೂಂಡಾ ಕಾಯ್ದೆಯಡಿ ಬಂಧನ

ಕಲಬುರಗಿ,ಅ.23-ನಗರದ ರಾಘವೇಂದ್ರ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಅಸ್ಲಂ ಪಟೇಲ್ ಅಲಿಯಾಸ್ ಬಾಂಬೆ ಅಸ್ಲಂ ಎಂಬಾತನನ್ನು ಗುಂಡಾ ಕಾಯ್ದೆಯಡಿ ಬಂಧಿಸಿ, ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶಿಸಲಾಗಿದೆ.
ಆರೋಪಿ ವಿರುದ್ಧ 2012ರಿಂದ 2026ರವರೆಗೆ ಕಲಬುರಗಿ ನಗರದ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ, ಜೀವ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಒಟ್ಟು
ಒಟ್ಟು 20 ಪ್ರಕರಣಗಳು ದಾಖಲಾಗಿವೆ.
ಆರೋಪಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಘವೇಂದ್ರ ನಗರ ಠಾಣೆಯ ಪೆÇಲೀಸ್ ಇನ್‍ಸ್ಪೆಕ್ಟರ್ ವಾಜೀದ್ ಪಟೇಲ್ ಸಲ್ಲಿಸಿದ ವರದಿಯ ಆಧಾರದ ಮೇಲೆ ಪೆÇಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ಪರಿಶೀಲನೆಯ ನಂತರ ಗುಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.