
ಕಲಬುರಗಿ,ಅ.23-ಮನೆಯ ಪಕ್ಕದ ಕೋಣೆಯಲ್ಲಿ ಕಟ್ಟಿದ್ದ 80 ಸಾವಿರ ರೂ.ಮೌಲ್ಯದ 9 ಆಡು, ಹೋತಮರಿಗಳನ್ನು ಕಳವು ಮಾಡಿರುವ ಘಟನೆ ಕೆರಿಭೋಸಗಾ ಗ್ರಾಮದಲ್ಲಿ ನಡೆದಿದೆ.
ಅನುಪ ಹಾಗರಗಿ ಎಂಬುವವರಿಗೆ ಸೇರಿದ ಆಡು ಮತ್ತು ಹೋತಮರಿಗಳೇ ಕಳವಾಗಿದ್ದು, ಅವರು ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.
1.50 ಲಕ್ಷ ಮೌಲ್ಯದ ರಾಡ್ ಕಳವು
ನಗರದ ತಾರಫೈಲ್ ಏರಿಯಾ ಹತ್ತಿರದ ದದ್ದಾಪುರ ಗ್ರಾಮದ ಸರ್ವೆ ನಂ.19ರಲ್ಲಿ ಬರುವ 2 ಎಕರೆ 30 ಗುಂಟೆ ಜಮೀನಿನ ದಕ್ಷಿಣ ಭಾಗದಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸಲಾಗುತ್ತಿದ್ದು, ಕಾಂಪೌಂಡ್ ಗೋಡೆ ಮೇಲಿನ 1.50 ಲಕ್ಷ ರೂ.ಮೌಲ್ಯದ 12 ಎಂ.ಎಂ ಮತ್ತು 16 ಎಂ.ಎಂ.ರಾಡ್ಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಜಮೀನಿನ ಮಾಲಿಕ ಸರೇಶ ಮಹಾಗಾಂವಕರ್ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.






















