Home ಜಿಲ್ಲೆ ಕಲಬುರಗಿ ಸಪ್ತ ನೇಕಾರ ಸೇವಾ ಸಂಘದಿಂದ ದಸರಾ ಪೂಜಾ ಉತ್ಸವ

ಸಪ್ತ ನೇಕಾರ ಸೇವಾ ಸಂಘದಿಂದ ದಸರಾ ಪೂಜಾ ಉತ್ಸವ

ಕಲಬುರಗಿ,ಅ.23: ನಗರದ ಸಪ್ತ ನೇಕಾರ ಸೇವಾ ಸಂಘದ ವತಿಯಿಂದ ದಸರಾ ಪೂಜೆ ಸಂಭ್ರಮದಿಂದ ಆಚರಿಸಿ ಸಂಘದ ನೂತನ ನಾಮಫಲಕ ಅನಾವರಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಸಂತೋಷಕುಮಾರ ಕುಸಾಮಾ ಅವರು ಶಕ್ತಿದೇವತೆ ಮಹಾಮಾತೆ ಅಂಬಾ ಭವಾನಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಡಾ. ಕಿರಣ ದೇಶಮುಖ ಅವರು ಸಂಘದ ನೂತನ ನಾಮಫಲಕವನ್ನು ಅನಾವರಣಗೊಳಿಸಿದರು.
ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು.ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲಪುರ ಸ್ವಾಗತಿಸಿದರು. ನ್ಯಾಯವಾದಿ ಜೆನವೇರಿ ವಿನೋದಕುಮಾರ ನಿರೂಪಣೆ ಹಾಗೂ ಪ್ರಸ್ತಾವನೆ ನೆರವೇರಿಸಿದರು. ಸಂಘದ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ ವಂದಿಸಿದರು.
ಇದೆ ಸಂದರ್ಭದಲ್ಲಿ, ಸಂಘದ ಸದಸ್ಯರಾಗಲು, ಕರೆ ನೀಡಲಾಯಿತು. ಅಧಿಕೃತವಾಗಿ ಸಂಘದ ಸದಸ್ಯರಾಗ ಬಯಸುವರು ಸಂಘಕ್ಕೆ ರೂ. 1121 ಸಂದಾಯಿಸಿ, ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಾಗರಾಜ್ ಕುಸಾಮಾ, ಮಲ್ಲಿನಾಥ್ ಕುಂಟೋಜಿ, ಡಾ. ಬಸವರಾಜ್ ಚನ್ನಾ, ವೀರಭಸವಂತಪ್ಪ ಬುಳ್ಳ, ರಾಜಶೇಖರ್ ಘಶನೇ, ಶರವಣಕುಮಾರ ಮುನ್ನೊಳ್ಳಿ, ರೇವಣಸಿದ್ಧಪ್ಪ ಗಡ್ಡದ, ಶಿವಚೇಲ್ಲಪ್ಪ ಪುರವಂತ, ನಿಂಬೆನೆಪ್ಪ ಸಾಹುಕಾರ ಮಂಗಲಗಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಪ್ತ ಸಮಾಜದ ಬಂಧುಗಳು ಭಾಗವಹಿಸಿದ್ದರು.