Home ಜಿಲ್ಲೆ ಮೈಸೂರು ಜಿಲ್ಲಾ ಮಲೆಯಾಳಿ ಸಮಾಜದಿಂದ ಓಣಂ ಸಂಗಮ್ ಆಚರಣೆ

ಜಿಲ್ಲಾ ಮಲೆಯಾಳಿ ಸಮಾಜದಿಂದ ಓಣಂ ಸಂಗಮ್ ಆಚರಣೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.07-
ಜಿಲ್ಲಾ ಮಲೆಯಾಳಿ ಸಮಾಜದಿಂದ ಭಾನುವಾರ ಓಣ ಸಂಗಮಮ್ ಸಂಭ್ರಮದಿಂದ ಆಚರಿಸಲಾಯಿತು.
ಜೋಡಿ ರಸ್ತೆಯ ಸಂತ ಪೌಲರ ಸಮುದಾಯ ಭವನದಲ್ಲಿ ಮೊದಲಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೈಸೂರಿನ ಸುಪ್ರಸಿದ್ಧ ರಘುಲಾಲ್ ಕಂಪೆನಿಯ ಔಷಧಿ ವಿತರಕರು, ಮೈಸೂರು ನಗರದ ಹಸಿರು ಹೊದಿಕೆಯ ಹರಿಕಾರ ರಾಘವನ್ ಮಾತನಾಡಿ, ಚಾಮರಾಜನಗರ ಜಿಲ್ಲಾ ಮಲೆಯಾಳಿ ಸಮಾಜ ರಾಜ್ಯದ ಇತರ ಜಿಲ್ಲೆಗಳ ಮಲೆಯಾಳಿ ಸಮಾಜಗಳಿಗೆ ಕಡಿಮೆ ಇಲ್ಲದಂತೆ ಅನೇಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಮೊಟ್ಟಮೊದಲ ಬಾರಿಗೆ ಚಾಮರಾಜನಗರದಲ್ಲಿ ಶವ ವಾಹನದ ಸೇವೆ ಕಲ್ಪಿಸಿ ಅನೇಕ ವರ್ಷಗಳ ಕಾಲ ನಡೆಸಿ, ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಅದ್ದೂರಿಯಾಗಿ ಓಣ ಸಂಗಮಮ್ ನಡೆಸಿಕೊಂಡು ಬರುತ್ತಿದೆ. ಸಮಾಜಕ್ಕೆ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರನ್ನು ಗೌರವಿಸುವ ಮಹತ್ಕಾರ್ಯ ಮಾಡುತ್ತಿದೆ. ಈ ಬಾರಿ ಚಾಮರಾಜನಗರ ಪಟ್ಟಣ ಮತ್ತು ಜಿಲ್ಲೆಯ ಅನೇಕ ಕಡೆ ಸಾಲುಮರಗಳನ್ನು ಬೆಳೆಸಿ ಪೆÇೀಷಿಸುತ್ತಿರುವ ಸಿ.ಎಂ.ವೆಂಕಟೇಶ್ ರನ್ನು ಕರೆದು ಗೌರವಿಸುತ್ತಿರುವುದು ಮೈಸೂರಿನಗರದಲ್ಲಿ ಹಸಿರು ಕವಚದ ಹೊದಿಕೆ ಮಾಡುತ್ತಿರುವ ನನಗೆ ವೈಯಕ್ತಿಕವಾಗಿ ತುಂಬಾ ಖುಷಿಯ ವಿಚಾರ ಎಂದರು.


ಗೌರವ ಸ್ವೀಕರಿಸಿದ ಪರಿಸರ ಪ್ರೇಮಿ ಸಿ.ಎ. ವೆಂಕಟೇಶ್ ಮಾತನಾಡಿ, ರಾಘವನ್ ಮೈಸೂರು ನಗರದಲ್ಲಿ ಸ್ವಂತ ಖರ್ಚಿನಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ಅವುಗಳಿಗೆ ಕಬ್ಬಿಣದ ರಕ್ಷಾ ಕವಚಗಳನ್ನು ಹಾಕಿ ನೀರೆರೆದು ಪೆÇೀಷಿಸಿ ಇಡೀ ನಗರದಲ್ಲಿ ಹಸಿರು ಕವಚ ಹೊದಿಸಿದ್ದಾರೆ. ನಾಗರಿಕರಿಗೂ ಗಿಡಗಳನ್ನು ರಕ್ಷಾ ಕವಚಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಇದೇ ಕಾರ್ಯ ಮಾಡುತ್ತಿರುವ ನನಗೆ ತುಂಬಾ ಖುಷಿಯ ವಿಚಾರ ಎಂದರು. ಚಾಮರಾಜನಗರದಲ್ಲಿ ನನ್ನನ್ನೂ ವಿವಿಧ ಸಂಘ ಸಂಸ್ಥೆಗಳು ಕರೆದು ಗೌರವಿಸುತ್ತಾರೆ. ಇದರ ಬದಲು ನಾನು ನೆಟ್ಟ ಗಿಡಗಳಿಗೆ ನೀರುಣಿಸುವುದು ಬಹಳ ಖರ್ಚು ಬೇಡುತ್ತದೆ. ನಿಮ್ಮ ಮನೆಯ ಹುಟ್ಟು ಹಬ್ಬ ಮೊದಲಾದ ಶುಭ ಕಾರ್ಯಗಳ ವೇಳೆ ಒಂದು ಟ್ಯಾಂಕರ್ ನೀರಿನ ಹಣ ಕೊಟ್ಟು ಅರ್ಥಪೂರ್ಣವಾಗಿ ಆಚರಿಸಿ ಎಂದು ಕರೆ ಕೊಟ್ಟರು.


ಮಲೆಯಾಳಿ ಸಮಾಜದವರು ಜಾತಿ,ಮತ,ಧರ್ಮ ಭೇದವಿಲ್ಲದೆ ಓಣಂ ಹಬ್ಬವನ್ನು ಆಚರಿಸುತ್ತಾರೆ. ಇದೊಂದು ತುಂಬಾ ಸಂತೋಷದ ವಿಚಾರ ಎಂದರು.
ಮೈಸೂರು ಕೇರಳ ಸಮಾಜಂನ ಹಿಂದಿನ ಉಪಾಧ್ಯಕ್ಷ ಹಾಗೂ ಹಿರಿಯ ಲೆಕ್ಕ ಪರಿಶೋಧಕ ಎಬ್ಬಿ ಇಪನ್, ಜಿಲ್ಲಾ ಮಲೆಯಾಳಿ ಸಮಾಜದ ಅಧ್ಯಕ್ಷ ಪ್ರಕಾಶ್ ಕಾರ್ಯದರ್ಶಿ ಸಿಬಿನ್ ಸಿ. ವರ್ಗೀಸ್ ಮಾತನಾಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ನವಾಜ್ ಮಾಜಿ ಅಧ್ಯಕ್ಷ ರಾಜು ವರ್ಗೀಸ್ ಮಾಜಿ ಕಾರ್ಯದರ್ಶಿ ವಿಜಯಕುಮಾರ್ ಸಂಚಾಲಕ ರಾಬರ್ಟ್ ವರ್ಗೀಸ್ ಇದ್ದರು.


ಬೆಳಗಿನಿಂದ ಸಂಜೆಯವರೆಗೂ ವಿವಿಧ ಬಗೆಯ ಹೂವುಗಳಿಂದ ಬಿಡಿಸಲಾದ ರಂಗೋಲಿ ಓಣ ಪೂಕಳಂ, ಕೇರಳದ ಸಾಂಪ್ರದಾಯಿಕ ಚಂಡೆ ಮೇಳಂ, ಸಂಗೀತ ಕಾರ್ಯಕ್ರಮ, ಕೇರಳದ ಸಾಂಪ್ರದಾಯಿಕ ನೃತ್ಯ, ಬಲಿ ಚಕ್ರವರ್ತಿ ಆಗಮಿಸಿ ನಾಡಿನ ಮಳೆಬೆಳೆ ಪ್ರಜೆಗಳ ಯೋಗಕ್ಷೇಮ ವಿಚಾರಿಸುವುದು, ಜೆಎಸ್‍ಎಸ್ ನಸಿರ್ಂಗ್ ಕಾಲೇಜು, ಮನೋನಿಧಿ ನಸಿರ್ಂಗ್ ಕಾಲೇಜು ಮಲೆಯಾಳಿ ವಿದ್ಯಾರ್ಥಿಗಳಿಂದ ಹಾಗೂ ಇತರರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಭಿನವ್ ವರ್ಗೀಸ್ ಮತ್ತು ಅಭಿಶೇಕ್‍ರಿಗೆ ಪ್ರತಿಭಾ ಪುರಸ್ಕಾರ, ಆಟೋಟಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ, ಸಾಂಪ್ರದಾಯಿಕ ಭೋಜನ ಓಣಂ ಬಹು ಸಡಗರ ಸಂಭ್ರಮದಿಂದ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಲೆಯಾಳಿ ಕುಟುಂಬಗಳು ಸಕ್ರಿಯವಾಗಿ ಪಾಲ್ಗೊಂಡರು.