
ಕಲಬುರಗಿ: ಹಿಂದೂತ್ವದೊಂದಿಗೆ ಬಸವಾದಿ ಶರಣರ ಹೆಸರು ಸೇರಿಸುವುದನ್ನು ಖಂಡಿಸಿ ಬಸವ ತತ್ವ ಹಾಗೂ ಸಂವಿಧಾನ ಸಂರಕ್ಷಣೆ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ವಿವಿಧ ಮಠಾಧೀಶರು, ಸಮಿತಿ ಗೌರವಾಧ್ಯಕ್ಷ ಪ್ರೊ.ಆರ್.ಕೆ.ಹುಡಗಿ, ಕಾರ್ಯಾಧ್ಯಕ್ಷ ಆರ್.ಜಿ.ಶೆಟಗಾರ, ಅರ್ಜುನ ಭದ್ರೆ, ಮರೆಪ್ಪ ಹಳ್ಳಿ, ಪಿಡ್ಡೆಪ್ಪ ಜಾಲಗಾರ, ಶಾಮ ನಾಟಿಕಾರ, ಡಾ.ಮೀನಾಕ್ಷಿ ಬಾಳಿ, ಸುಧಾಮ ಧನ್ನಿ, ಮಹಾಂತೇಶ ಕವಲಗಾ, ಲಚ್ಚಪ್ಪ ಜಮಾದಾರ, ಸುಭಾಷ ರಾಠೋಡ್, ಅಶೋಕ ಘೂಳಿ, ರವಿ ಸಜ್ಜನ್, ರವೀಂದ್ರ ಶಾಬಾದಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.























