
ಜೇವರ್ಗಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಾ ಬಿ ಅಸ್ಸ್ಟಿಗೆ ವಿದ್ಯಾರ್ಥಿಗಳು ಸೇವಾ ಮನೋಭಾವನೆ ದಿಂದ ದೇಶವನ್ನು ಕಟ್ಟುವ ಕೆಲಸ ಮಾಡುತ್ತಾರೆ, ಸೇವೆ ಮಾಡುತ್ತಾ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಬಹುದಾಗಿದೆ ಎಂದು ಹೇಳಿದರು..
ಅವರು, ಸೆ,24 ರಂದು ದು ಸರಕಾರ ಪದವಿ ಕಾಲೇಜಿನ ಐ ಕ್ಯೂ ಎ ಸಿ ಹಾಗೂ ಎನ್ ಎಸ್ ಎಸ್ ನ ನ ವಿವಿಧ ಘಟಕಗಳ ಸಹಯೋಗದಲ್ಲಿ ಆಯೋಜಿಸಿಲಾದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಮುಂಚೆ ಕಾಲೇಜಿನ ಪ್ರಾಂಶುಪಾಲರು, ಎನ್.ಎಸ್.ಎಸ್ ಧ್ವಜಾರೋಹಣ ನೆರವೇರಿಸಿದ ತದನಂತರ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್ ನ ಮಹತ್ವದ ಬಗ್ಗೆ ತಿಳಿಸಿ ಹೇಳಿದರು.
ಡಾ. ಸಂತೋಷ್ ಕುಮಾರ್ ಡಾ ಸಂದೀಪ್ ತಿವಾರಿ ಅವರು ವೇದಿಕೆ ಮೇಲೆ ಇದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಡಾ. ಶರಣಪ್ಪ ಅವರು ಎನ್.ಎಸ್.ಎಸ್‍ನ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶ್ರೀ ಕುಪೇಂದ್ರ ರಾಥೋಡ್ ಪ್ರಾಸ್ತಾವಿಕವಾಗಿ ಎನ್.ಎಸ್.ಎಸ್‍ನ ಪರಿಚಯ ಮಾಡಿಕೊಟ್ಟರು. ಶ್ರೀಧರ್ ಸ್ವಾಗತಿಸಿದರು. ಕುಮಾರಿ ಅಪರ್ಣ ವಂದಿಸಿದರು ಕಾರ್ಯಕ್ರಮವನ್ನು ಡಾ. ಶಿಲ್ಪ ಜಗದೀಶ್ ನಿರೂಪಿಸಿದರು ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕ ವರ್ಗದವರು ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.























