
ಕಲಬುರಗಿ,ಸೆ.26-ಪಟ್ಟಣ ಟೋಲ್ ನಾಕಾ ಹತ್ತಿರವಿರುವ ದಾಬಾ ಒಂದರ ಬಳಿ ಮಹಿಂದ್ರಾ ಬುಲೆರೋ ಮ್ಯಾಕ್ಸ್ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ವiಹಾರಾಷ್ಟ್ರ ಕಡೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ತಹಶೀಲ್ ಕಾರ್ಯಾಲಯದ ಆಹಾರ ನಿರೀಕ್ಷಕ ನವೀನ್ ಎಂ ಮತ್ತು ಸಬ್ ಅರ್ಬನ್ ಪೊಲೀಸ್ ಠಾಣೆ ಎಎಸ್‍ಐ ಭೀಮಾಶಂಕರ, ಸಿಬ್ಬಂದಿಗಳಾದ ಪುಂಡಲೀಕ, ಗುಂಡೇರಾಯ, ಸಂಜೀವಕುಮಾರ ಅವರು ದಾಳಿ ನಡೆಸಿ 2.11 ಲಕ್ಷ ರೂ.ಮೌಲ್ಯದ ಅಕ್ಕಿ ಮತ್ತು 5 ಲಕ್ಷ ರೂ.ಮೌಲ್ಯದ ಮಹಿಂದ್ರಾ ಬುಲೆರೋ ಮ್ಯಾಕ್ಸ್ ಪಿಕಪ್ ವಾಹನ ಜಪ್ತಿ ಮಾಡಿದ್ದಾರೆ.
ಈ ಸಂಬಂಧ ವಾಹನ ಚಾಲಕ ಅಂಬ್ರೇಶ್ ಮತ್ತು ವಾಹನದ ಮಾಲಿಕ ಪ್ರಭಾಕರ ವಿರುದ್ಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.























