Home ಜಿಲ್ಲೆ ಕಲಬುರಗಿ ಇಂದಿರಾಗಾಂಧಿಯವರ ಜನ್ಮದಿನ ಆಚರಣೆ

ಇಂದಿರಾಗಾಂಧಿಯವರ ಜನ್ಮದಿನ ಆಚರಣೆ

ಕಲಬುರಗಿ,ನ.20-ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ಎಂದೇ ಹೆಸರು ಪಡೆದ ಇಂದಿರಾಗಾಂಧಿ ಯವರ ಜನ್ಮ ದಿನವನ್ನು ಆಚರಣೆ ಮಾಡಲಾಯಿತು.
ಇಂದಿರಾಗಾಂಧಿಯವರ ಕುರಿತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಕಿರಣ ದೇಶಮುಖ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಬಾಬುರಾವ ಜಾಗೀರದಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ರಾಜಗೋಪಾಲರೆಡ್ಡಿ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಮಹಾಂತಪ್ಪ ಸಂಗಾವಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಂದ್ರಿಕಾ ಪರಮೇಶ್ವರ, ಯುವ
ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶಕೀಲ ಅಹ್ಮದ್ ಸರಡಗಿ, ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ಮಹೇಶ ಸುತಾರ, ಮುಖಂಡರಾದ ನಾರಾಯಣರಾವ ಕಾಳೆ, ಶಿವಾನಂದ ಹೊನಗುಂಟಿ, ಶಿವರಾಜ ಕೋಳಕೂರ, ವಿಶ್ವನಾಥ ಕೊರವಾರ, ಶಫೀಕ್ ಅಹ್ಮದ್, ಸಾಬೀರ ಚೌದ್ರಿ ಬಾಗಬಾನ, ಮಲ್ಲಿಕಾರ್ಜುನ ನೀಲೂರ, ತುಕಾರಾಮ ಕೊಳ್ಳೂರ, ಆನಂದ ವಾರಿಕ್, ಶಿವಾನಂದ ತೊರವಿ, ಮಹಿಳಾ ಮುಖಂಡರಾದ ಸಾಹಾರಾಬಾನು, ಸವಿತಾ ಒಂಟಿ, ಸಂಗೀತಾ ಪಾಟೀಲ, ಶೀಲಾ ಗಾಯಕವಾಡ, ಅನುರಾಧಾ ನಿನ್ನೆ, ಸೀತಾ ಬಡಿಗೇರ, ಕವಿತಾ ಕೊರಳ್ಳಿ, ಮಹಾನಗರ ಪಾಲಿಕೆ ಸದಸ್ಯರಾದ ರೇಣುಕಾ ಪರಶುರಾಮ, ನಿಂಗಮ್ಮ ಕಟ್ಟಿಮನಿ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.