
ಕಲಬುರಗಿ,ನ.20-ರೋಜಾ, ಚೌಕ್ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಗಾ ಹತ್ತಿರದ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ಮೃತ್ಯುಂಜಯ, ಅಶೋಕ ಕಟಕೆ, ನಾಗೇಂದ್ರ, ನಾಗರಾಜ ಮತ್ತು ಸುನೀಲಕುಮಾರ ದಾಳಿ ನಡೆಸಿ ನೂರಾನಿ ಮೊಹಲ್ಲಾದ ಮಹ್ಮದ್ ಅಜರ್ ತಂದೆ ಮಹ್ಮದ್ ಅಕ್ಬರ್ (30) ಎಂಬಾತನನ್ನು ಬಂಧಿಸಿ 5030 ರೂ. ನಗದು ಜಪ್ತಿ ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾಲೇಜು ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ನಂಬರ್ ಬರದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ಮೃತ್ಯುಂಜಯ, ಅಶೋಕ ಕಟಕೆ, ನಾಗೇಂದ್ರ, ನಾಗರಾಜ ಮತ್ತು ಸುನೀಲಕುಮಾರ ದಾಳಿ ನಡೆಸಿ ಇಸ್ಲಾಮಾಬಾದ ಕಾಲೋನಿಯ ಮಹ್ಮದ್ ಸತ್ತಾರ ಮಹ್ಮದ್ ನೂರ್ ಪಾಷಾ (36) ಎಂಬಾತನನ್ನು ಬಂಧಿಸಿ 3020 ರೂ.ನಗದು ಜಪ್ತಿ ಮಾಡಿದ್ದಾರೆ.
ಖಿಲಾ ಎದರುಗಡೆ ಇರುವ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಎಎಸ್ಐ ರಮೇಶ್, ಸಿಬ್ಬಂದಿಗಳಾದ ಸುರೇಶ, ಅಭಿಷೇಕ ಅವರು ದಾಳಿ ನಡೆಸಿ ಶಿವಾಜಿ ನಗರದ ಬಸವರಾಜ ರೇವಪ್ಪ ಕಂಠಿ (74) ಎಂಬಾತನನ್ನು ಬಂಧಿಸಿ 1080 ರೂ.ನಗದು ಜಪ್ತಿ ಮಾಡಿದ್ದಾರೆ. ರೋಜಾ, ಚೌಕ್ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.




















