Home ಜಿಲ್ಲೆ ಬೆಂಗಳೂರು ಇಂದಿನಿಂದ ಆಡಿ ಮಹೋತ್ಸವ

ಇಂದಿನಿಂದ ಆಡಿ ಮಹೋತ್ಸವ

ಬೆಂಗಳೂರು, ಆ. 7- ನಗರದ ಶಿವಾಜಿ ನಗರದ ಚಿಕ್ಕಬಜಾರ್ ರಸ್ತೆಯಲ್ಲಿ ನೆಲಸಿರುವ ಶ್ರೀ ಪಡವೇಟ್ಟಮ್ಮನವರ ದೇವಸ್ಥಾನದಲ್ಲಿ ಇಂದಿನಿಂದ ಆ. 16 ರವರೆಗೆ ಆಡಿ ಉತ್ಸವ ಮಹೋತ್ಸವವನ್ನು ಏರ್ಪಡಿಸಲಾಗಿದೆ.

ಇಂದು ಸಂಜೆ 4.30ಕ್ಕೆ ದೇವಿಗೆ ಕಂಕಣ ಕಟ್ಟುವುದು. ಆ.12 ರಂದು ಬೆಳಿಗ್ಗೆ 10.30ಕ್ಕೆ ತಂಜಾವೂರು ಕರಗ ಮಹೋತ್ಸವ. 14 ರಂದು ಶುಕ್ರವಾರ ಸಂಜೆ 6ಗಂಟೆಗೆ ಶ್ರೀ ಪಡವೇಟ್ಟಮ್ಮನ್ ಅವರ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಅಲಂಕರಿಸಿ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಈ ಉತ್ಸವದಲ್ಲಿ ಹಲವಾರು ಜಾನಪದ ತಂಡಗಳು ಭಾಗವಹಿಸಲಿವೆ.


ಆ. 18 ರಂದು ಭಾನುವಾರ ಅಂಬಲಿಯನ್ನಿಟ್ಟು ಕುಂಭ ಪೂಜೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಪೂಜಾರಿ ಹಾಗೂ ಟ್ರಸ್ಟಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.