
ಬೆಂಗಳೂರು, ಆ.7:- ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3191 ಹಾಗೂ 3192ರ ಸಂಯುಕ್ತ ಆಶ್ರಯದಲ್ಲಿ ಲಾಲ್ಬಾಗ್ ಸಸ್ಯೋದ್ಯಾನದಲ್ಲಿ ಆಯೋಜಿಸಲಾದ ಕಲಾ ವನ ? ರೋಟರಿಯ ಹೆಜ್ಜೆ ಕಲಾವಿದರ ಕಡೆಗೆ' ಮುಕ್ತ ಕಲಾ ಪ್ರದರ್ಶನಕ್ಕೆ ಇಂದು ಅದ್ಧೂರಿಯಾಗಿ ಚಾಲನೆ ದೊರೆಯಿತು. ಲಾಲ್ಬಾಗ್ನ ಪುಷ್ಪ ಪ್ರದರ್ಶನದ ವರ್ಣರಂಜಿತ ಸೊಬಗು, ಪ್ರಕೃತಿಯ ಹಸಿರು ಸಿರಿ ಹಾಗೂ ಕಲಾವಿದರ ಸೃಜನಾತ್ಮಕ ಕಲಾಕೃತಿಗಳು ಒಂದೇ ವೇದಿಕೆಯಲ್ಲಿ ಒಂದಾಗುವ ಮೂಲಕ ಕಾರ್ಯಕ್ರಮ ವಿಶಿಷ್ಟ ಕಲಾ ಸಂಭ್ರಮಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3191ರ ಜಿಲ್ಲಾ ರಾಜ್ಯಪಾಲ ರೊ. ಡಾ. ಅನಿಲ್ ಗುಪ್ತಾ, ಕಲೆ ಸಮಾಜದ ಆತ್ಮವಾಗಿದ್ದು, ಕಲಾವಿದರಿಗೆ ಪೆÇ್ರೀತ್ಸಾಹ ನೀಡುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು. ಕಲಾವಿದರ ಪ್ರತಿಭೆಯನ್ನು ಜನಸಾಮಾನ್ಯರ ಬಳಿಗೆ ತಲುಪಿಸುವ ಉದ್ದೇಶದಿಂದ ಪ್ರಕೃತಿಯ ಮಡಿಲಲ್ಲೇ ಈ ವಿಶಿಷ್ಟ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ.ರೋಟರಿಯ ಹೆಜ್ಜೆ ಕಲಾವಿದರ ಕಡೆಗೆ’ ಎಂಬ ಪರಿಕಲ್ಪನೆ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಅವರ ಪ್ರತಿಭೆಗೆ ಹೊಸ ಅವಕಾಶಗಳನ್ನು ಕಲ್ಪಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3192ರ ಜಿಲ್ಲಾ ರಾಜ್ಯಪಾಲ ರೊ. ರವಿಶಂಕರ್ ಡಾಕೋಜು ಮಾತನಾಡಿ, ಲಾಲ್ಬಾಗ್ನ ಪುಷ್ಪ ಪ್ರದರ್ಶನದ ಬಣ್ಣಗಳ ವೈಭವ ಮತ್ತು ಕಲಾವಿದರ ಚಿತ್ರಕಲೆಗಳು ಪ್ರಕೃತಿ ಹಾಗೂ ಸಂಸ್ಕೃತಿಯ ಅದ್ಭುತ ಸಂಗಮವನ್ನು ಪ್ರತಿಬಿಂಬಿಸುತ್ತಿವೆ ಎಂದು ಹೇಳಿದರು. ಹೂಗಳ ಬಣ್ಣಗಳು ಹಾಗೂ ಕಲಾಕೃತಿಗಳ ವರ್ಣ ವೈವಿಧ್ಯ ಒಂದಾಗಿ ಸಂದರ್ಶಕರಿಗೆ ಅಪೂರ್ವ ಅನುಭವವನ್ನು ನೀಡುತ್ತಿವೆ. ಪ್ರಕೃತಿ, ಬಣ್ಣಗಳು ಮತ್ತು ಕಲೆಯ ಸಮನ್ವಯದ ಮೂಲಕ ಪರಿಸರ ಜಾಗೃತಿ ಹಾಗೂ ಸೃಜನಶೀಲತೆಯನ್ನು ಜನರಲ್ಲಿ ಬೆಳೆಸುವ ಉತ್ತಮ ಪ್ರಯತ್ನ ಇದಾಗಿದೆ ಎಂದು ಶ್ಲಾಘಿಸಿದರು.
ಈ ಕಲಾ ವನ' ಪ್ರದರ್ಶನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಹಿರಿಯ ಹಾಗೂ ಯುವ ಕಲಾವಿದರು ತಮ್ಮ ಅತ್ಯುತ್ತಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದು, ಸಾವಿರಾರು ಪ್ರವಾಸಿಗರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ವೀಕ್ಷಿಸಿದರು. ಪ್ರಕೃತಿಯ ನಡುವೆ ಕಲೆಯನ್ನು ಜನತೆಗೆ ಪರಿಚಯಿಸುವ ಈ ವಿನೂತನ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷೆ ಉಮಾ ಸತ್ಯ ಅವರು, ಕಲಾವಿದರಿಗೆ ನಿರಂತರವಾಗಿ ಅವಕಾಶಗಳನ್ನು ಕಲ್ಪಿಸಿ, ಸಮಾಜದಲ್ಲಿ ಕಲಾ ಸಂಸ್ಕೃತಿಯನ್ನು ಉತ್ತೇಜಿಸುವ ಅನೇಕ ಕಾರ್ಯಕ್ರಮಗಳನ್ನು ಮುಂದೆಯೂ ಆಯೋಜಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ರೋಟರಿ ಸದಸ್ಯರು, ಯೋಜನಾ ಸಂಯೋಜಕರು, ಕಲಾವಿದರು ಹಾಗೂ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನ ಇಂಟನ್ರ್ಯಾಷನಲ್ ಸರ್ವಿಸ್ ನಿರ್ದೇಶಕರು, ವಾಣಿಶ್ರೀ ಪ್ರಸಾದ್ , ಕಾರ್ಯದರ್ಶಿ ಪ್ರತಿಮಾ ಎನ್. ಟಿ. ಹಾಗೂ ಖ್ಯಾತ ಕಲಾವಿದರಾದ ಡಾ. ದೀಪಾಲಿ, ಜಗದೀಶ್ ಮತ್ತು ವರಲಕ್ಷ್ಮಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಸಹಕಾರ ನೀಡಿದರು. ಕಲಾ ವನ ರೋಟರಿಯ ಹೆಜ್ಜೆ ಕಲಾವಿದರ ಕಡೆಗೆ’ ಕಾರ್ಯಕ್ರಮವು ಪ್ರಕೃತಿ, ಕಲೆ ಮತ್ತು ಸಮಾಜವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ವಿಶಿಷ್ಟ ಸಾಂಸ್ಕೃತಿಕ ಉತ್ಸವವಾಗಿ ಯಶಸ್ವಿಯಾಗಿ ಆರಂಭಗೊಂಡಿದ್ದು, ಲಾಲ್ಬಾಗ್ನ ಪುಷ್ಪ ಪ್ರದರ್ಶನಕ್ಕೆ ಮತ್ತಷ್ಟು ಕಳೆ ತಂದಿದೆ.

































