
ಡಲ್ಲಾಸ್,ಜೂ.೨೮-ಹಾಲಿ ಚಾಂಪಿಯನ್ ಅರ್ಜೆಂಟೀನಾ ಡಲ್ಲಾಸ್ ಕ್ರೀಡಾಂಗಣದಲ್ಲಿ ನಡೆದ ಗುಂಪು ಜೆ ಪಂದ್ಯದಲ್ಲಿ ಜೋರ್ಡಾನ್ ಎದುರಿಸಿ ಈ ಪಂದ್ಯವನ್ನು ಹಾಲಿ ಚಾಂಪಿ
ಯನ್ಗಳು ೩-೧ ಅಂತರದಿಂದ ಗೆದ್ದರು.
ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ೨೦೨೬ ರ ಫಿಫಾ ವಿಶ್ವಕಪ್ನಲ್ಲಿ ಜೋರ್ಡಾನ್ ವಿರುದ್ಧದ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದರು. ಸತತ ಏಳು ಫಿಫಾ ವಿಶ್ವಕಪ್ ಋತುಗಳಲ್ಲಿ ಗೋಲು ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಮೆಸ್ಸಿ ಪಾತ್ರರಾದರು. ೨೪ನೇ ನಿಮಿಷದಲ್ಲಿ ಜಿಯೋವಾನಿ ಸೆಲ್ಸೊ ಗಳಿಸಿದ ಗೋಲಿನಿಂದ ಅರ್ಜೆಂಟೀನಾ ೧-೦ ಮುನ್ನಡೆ ಸಾಧಿಸಿತು.
೩೧ನೇ ನಿಮಿಷದಲ್ಲಿ, ಜೋರ್ಡಾನ್ ತಂಡವು ತನ್ನ ಬಾಕ್ಸ್ನೊಳಗೆ ಫೌಲ್ ಮಾಡಿತು. ನಂತರ ಅರ್ಜೆಂಟೀನಾಗೆ ಪೆನಾಲ್ಟಿ ಶೂಟೌಟ್ ಅವಕಾಶ ದೊರೆಯಿತು. ಲೌಟಾರೊ ಮಾರ್ಟಿನೆಜ್ ಒಂದು ಗೋಲು ಗಳಿಸಿ ತಮ್ಮ ತಂಡವನ್ನು ೨-೦ ಮುನ್ನಡೆಯಲ್ಲಿರಿಸಿದರು.
ನಂತರ ಜೋರ್ಡಾನ್ ತಂಡದ ಮೂಸಾ ಅಲ್ತ ಮರಿ ೫೫ನೇ ನಿಮಿಷದಲ್ಲಿ ಗೋಲು ಗಳಿಸಿ ಸ್ಕೋರ್ ಅನ್ನು ೨-೧ಕ್ಕೆ ಹೆಚ್ಚಿಸಿದರು. ಮೆಸ್ಸಿ ೮೦ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡದ ಮುನ್ನಡೆಯನ್ನು ೩-೧ಕ್ಕೆ ಏರಿಸಿದರು, ಇದು ವಿಶ್ವಕಪ್ನಲ್ಲಿ ಅವರ ಆರನೇ ಗೋಲು. ಇದಾದ ನಂತರ ಯಾವುದೇ ತಂಡವು ಗೋಲು ಗಳಿಸಲು ಸಾಧ್ಯವಾಗಲಿಲ್ಲ, ಮತ್ತು ಅರ್ಜೆಂಟೀನಾ ಪಂದ್ಯವನ್ನು ೩-೧ ಅಂತರದಿಂದ ಗೆದ್ದು ಮುಂದಿನ ಸುತ್ತಿಗೆ ದೃಢವಾಗಿ ಮುನ್ನಡೆಯಿತು.
ಏತನ್ಮಧ್ಯೆ, ಜೋರ್ಡಾನ್ ತಂಡವು ವಿಶ್ವಕಪ್ನಿಂದ ಹೊರಬಿತ್ತು. ಇಂದಿನ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ಆರಂಭಿಕ ತಂಡದಲ್ಲಿ ಇರಲಿಲ್ಲ
.ಅವರು ೫೮ ನೇ ನಿಮಿಷದಲ್ಲಿ ಮೈದಾನಕ್ಕೆ ಇಳಿದರು.ಜೋರ್ಡಾನ್ ವಿರುದ್ಧದ ಲೀಗ್ ಪಂದ್ಯದಲ್ಲಿ ಮೆಸ್ಸಿ ೬೦ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಆಟಕ್ಕೆ ಇಳಿದು ಕೇವಲ ೨೦ ನಿಮಿಷಗಳಲ್ಲಿ ತಮ್ಮ ಛಾಪು ಮೂಡಿಸಿದರು. ಪಂದ್ಯದ ೮೦ನೇ ನಿಮಿಷದಲ್ಲಿ ತಮ್ಮ ತಂಡದ ಮೊದಲ ಗೋಲು ಗಳಿಸಿದರು, ೨೦೨೬ ರ ಫಾಫಿವಿಶ್ವಕಪ್ನಲ್ಲಿ ಅವರ ಆರನೇ ಗೋಲು ಗಳಿಸಿದರು ಮತ್ತು ಸತತ ಏಳು ವಿಶ್ವಕಪ್ ಪಂದ್ಯಗಳಲ್ಲಿ ಅವರ ಅಪ್ರತಿಮ ಗೋಲು ಗಳಿಸುವ ಸರಣಿಯನ್ನು ಮುಂದುವರೆಸಿದರು. ಒಟಮೆಂಡಿ ಅವರಿಗೆ ನಾಯಕನ ಬ್ಯಾಂಡ್ ನೀಡಿದರು. ಅರ್ಜೆಂಟೀನಾ ತಂಡವು ೩೨ ನೇ ಸುತ್ತಿನಲ್ಲಿ ಕೇಪ್ ವರ್ಡೆಯನ್ನು ಎದುರಿಸಲಿದೆ. ಕೇಪ್ ವರ್ಡೆ ತಮ್ಮ ಚೊಚ್ಚಲ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ನಾಕೌಟ್ಗಳಲ್ಲಿ ಸ್ಥಾನ ಪಡೆದಿದೆ.






















