
ಕಲಬುರಗಿ: ನಗರದ ಪಿಡಿಎ ಇಂಜನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಗುಲಬರ್ಗಾ ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘವು ಜಿಲ್ಲಾ ಮಟ್ಟದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪ್ರತಿಭಾವಂತ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿತು.ಜಗದ್ಗುರು ಡಾ. ಜಯಬಸವಕುಮಾರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ಸಮಾರಂಭದಲ್ಲಿ ಆನಂದ ಕೇಸನೂರ,ಸುರೇಶ ಸಜ್ಜನ,ಅಪ್ಪಾರಾವ ಪಾಟೀಲ ,ಶಂಕರಲಿಂಗ ಕಲಶೆಟ್ಟಿ,ರುದ್ರಗೌಡ ಪಾಟೀಲ,ಮಲ್ಲಣ್ಣಗೌಡ ಪಾಟೀಲ ಅವರು ಸೇರಿದಂತೆ ಹಲವರಿದ್ದರು.






















