
ಆಳಂದ,ಆ.16-ವಿದ್ಯುತ್ ತಗುಲಿ ಯುವಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಪಟ್ಟಣದ ನ್ಯೂ ಅನ್ಸಾರಿ ಗಲ್ಲಿಯಲ್ಲಿ ಇಂದು ನಡೆದಿದೆ.
ಉಮರ್ ಬಾಕರ್ ಅನ್ಸಾರಿ (25) ಮೃತಪಟ್ಟ ಯುವಕ.
ಬೆಳಿಗ್ಗೆ ನೀರು ಬಿಟ್ಟಿದ್ದರಿಂದ ಮೋಟಾರ್ ಚಾಲು ಮಾಡಲು ಹೋದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































