ಕಲಬುರಗಿ: ಜಿಲ್ಲಾ ಹಟಗಾರ ಸಮಾಜ ಸಂಘದಿಂದ ಇಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಸಮಾರಂಭ ಜರುಗಿತು.ಮೈಂದರಗಿಯ ಮೃತ್ಯುಂಜಯ ಮಹಾಸ್ವಾಮಿಗಳು,ಶರಣಬಸವೇಶ್ವರ ಸಂಸ್ಥಾನದ 9 ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ ,ಅಲ್ಲಮಪ್ರಭು ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ,ಶರಣಕುಮಾರ ಮೋದಿ,ಮಹಾದೇವ ಬಸರಕೋಡ,ಶ್ರವಣಕುಮಾರ ಮುನೋಳಿ,ಚಂದ್ರಕಾಂತ ಮುನೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.