
ಕಲಬುರಗಿ,ಆ.16-ರಸ್ತೆಯಲ್ಲಿ ಸಿಕ್ಕ ಮೊಬೈಲ್ ಮತ್ತು 22 ಸಾವಿರ ರೂಪಾಯಿಗಳಿದ್ದ ವ್ಯಾನಿಟಿ ಬ್ಯಾಗನ್ನು ಪೊಲೀಸ್ ಠಾಣೆಗೆ ಒಪ್ಪಿಸುವುದರ ಮೂಲಕ ಮಾನವೀಯತೆ ಮೆರೆದ ಆಟೋ ಚಾಲಕ ನಿಜಾಮ್ ಅಹಮದ್ ಅವರನ್ನು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಠಾಣೆಯ ಪಿಐ ಮಹಾಂತೇಶ್ ಪಾಟೀಲ ಮತ್ತು ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಸನ್ಮಾನಿಸಿದರು.
ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೂಪರ್ ಮಾರ್ಕೆಟ್ ರಸ್ತೆಯಲ್ಲಿ ಮಹಿಳೆಯೊಬ್ಬರು ಮೊಬೈಲ್ ಮತ್ತು 22000-/ ರೂ ಇದ್ದ ವ್ಯಾನಿಟಿ ಬ್ಯಾಗ್‍ನ್ನು ಕಳೆದುಕೊಂಡಿದ್ದರು. ರಸ್ತೆಯಲ್ಲಿ ಸಿಕ್ಕ ಸದರಿ ಬ್ಯಾಗನ್ನು ಆಟೋ ಚಾಲಕ ನಿಜಾಮ್ ಅಹಮದ್ ಅವರು ಬ್ರಹ್ಮಪುರ ಪೊಲೀಸ್ ಠಾಣೆಗೆ ತಂದು ಒಪ್ಪಿಸಿ ಮಾನವೀಯತೆ ಮೆರೆದಿದ್ದರು. ನಿಜಾಮ್ ಅಹಮದ್ ಅವರು ಠಾಣೆಗೆ ತಂದು ಒಪ್ಪಿಸಿದ ಮೊಬೈಲ್ ಮತ್ತು 22 ಸಾವಿರ ಹಣವಿದ್ದ ವ್ಯಾನಿಟಿ ಬ್ಯಾಗನ್ನು ಮಹಿಳೆಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.































