
ಕಲಬುರಗಿ,ಆ.16-ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಒಳ್ಳೆಯ ಸನ್ಮಾರ್ಗದತ್ತ ನಡೆಯಬೇಕು ಜೊತೆಗೆ ಧರ್ಮ, ಆಚರಣೆಯನ್ನು ಮಾಡುವುದನ್ನು ಕಲಿಯಬೇಕು ಅಂದಾಗ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯವೆಂದು ಶ್ರೀನಿವಾಸ್ ಸರಡಗಿಯ ಡಾ.ರೇವಣಸಿದ್ದ ಶಿವಾಚಾರ್ಯರು ಹೇಳಿದರು.
ನಗರದ ಶೇಖರೋಜಾ ರಸ್ತೆಯ ಗ0ದಿಗುಡಿ ಲೇಔಟ್ ಬಡಾವಣೆಯಲ್ಲಿರುವ ರಮೇಶ ಕಶೆಟ್ಟಿ ಕಮಲಾಪೂರ ಅವರ ಮನೆಯಲ್ಲಿ ಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆ ಕೇಂದ್ರ ಸಮಿತಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಒಂದು ತಿಂಗಳ ಶಿವಭಕ್ತರ ಮನೆ ಮನೆ ಮನೆಗೆ ಸಿದ್ದಾಂತ ಶಿಖಾಮಣಿ ಜ್ಞಾನ ಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಏನೇ ಕಷ್ಟ ಬಂದರೂ ಮನುಷ್ಯ ಅದನ್ನು ಎದುರಿಸಬೇಕು ಅಂದಾಗ ಜೀವನದಲ್ಲಿ ನಾವು ಬದುಕಲು ಸಾಧ್ಯ ನಾವು ಯಾವ ರೀತಿ ನಡೆದರು ಜೀವನದಲ್ಲಿ ಮಾತನಾಡುವುದು ಸಹಜ ಮನುಷ್ಯನ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ನಡೆ ಮುಂದೆ ನಡೆ ಮುಂದೆ ಅನ್ನೋ ಹಾಗೆ ಮುಂದಿನ ಹಾದಿ ಸರಿ ಮಾಡಿಕೊಳ್ಳುತ್ತಾ ಹೋಗಬೇಕು. ಮನುಷ್ಯ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು ಅವನ ಬುದ್ಧಿ ಅಷ್ಟೇ ಅಂತ ತಿಳಿದು ನಡೆಯಬೇಕು ಅಂದಾಗ ನಾವು ಸಮಾಜದಲ್ಲಿ ಮುಂದೆ ಸಾಗಲು ಸಾಧ್ಯವೇ ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ ಚಿ0ಚನಸೂರಿನ ಸಿದ್ದಮಲ್ಲ ಶಿವಾಚಾರ್ಯರು ತಮ್ಮ ಆಶೀರ್ವಚನ ನೀಡಿದರು. ಸಿದ್ದಾನಂದ ಮಹಾ ಶಿವಯೋಗಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಸೋಮಶೇಖರ್ ಮಠ ಅವರು ಮಾತನಾಡುತ್ತಾ ಈ ಸಂಘಕ್ಕೆ ನನ್ನ ಕಡೆಯಿಂದ ಎಷ್ಟು ಸಾಧ್ಯ ಅಷ್ಟು ಸಹಾಯ ಮಾಡಲು ಸಾಧ್ಯವೆಂದು ಅವರು ಹೇಳಿದರು. ಶಿಕ್ಷಕರಾದ ಶಿವಯ್ಯ ಮಠಪತಿ ಮಾತನಾಡಿದರು.
ಸಿದ್ಧಾಂತಶಿಖಾಮಣಿ ಪ್ರವಚನ ವೇದಿಕೆ ಕೇಂದ್ರ ಸಮಿತಿ ಅಧ್ಯಕ್ಷÀ ರಾಜಶೇಖರ್ ಪಾಟೀಲ್ ಬೆಡಸೂರ, ಗೌರವ ಅಧ್ಯಕ್ಷರಾದ ಶಿವರಾಯ ಮುಲಗೆ, ವಿಶ್ವನಾಥ ವಾಘಣಗೇರಿ, ಮಾದೇವಪ್ಪ ಆಲಗೂಡಕರ್, ಜಗದೇವಪ್ಪ ಕಲ್ಬುರ್ಗಿ, ಶರಣಬಸಪ್ಪ ಬಗಲಿ, ವಿಜಯಕುಮಾರ ಮಠಪತಿ, ಶಿವಾನಂದ ಮಠಪತಿ, ಗಂಗಾಧರ ಅಗ್ಗಿಮಠ, ಕೇದಾರನಾಥ್ ಮಲಕಪ್ಪ ಗೋಳ, ಚನ್ನಬಸಪ್ಪ ರಾಯನಾಡ, ರಾಜಶೇಖರ್ ಬೊಮ್ಮನಹಳ್ಳಿ, ಶಿವಪುತ್ರಪ್ಪ ಡಿಗ್ಗಿ ಅಲ್ಲದೆ ಸಮಸ್ತ ಬಡಾವಣೆಯ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿವಾನಂದ ಕಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಂಬಾರಾಯ ಕೋಣೆ ಸರ್ವರನ್ನು ಸ್ವಾಗತಿಸಿದರು. ಬಸವಣ್ಣಪ್ಪ ಕಿಣಗಿ, ಶಂಕರ ಕಿಣಗಿ ಅವರಿಂದ ಸಂಗೀತ ಸೇವೆ ಜರುಗಿತು.































