Home ಜಿಲ್ಲೆ ಕಲಬುರಗಿ ನೂತನ ಆವಿಷ್ಕಾರಗಳಿಗೆ ಯುವ ಸಂಶೋಧಕರು ಮುಂದಾಗಲಿ: ಬಟ್ಟು ಸತ್ಯನಾರಾಯಣ

ನೂತನ ಆವಿಷ್ಕಾರಗಳಿಗೆ ಯುವ ಸಂಶೋಧಕರು ಮುಂದಾಗಲಿ: ಬಟ್ಟು ಸತ್ಯನಾರಾಯಣ

ಕಲಬುರಗಿ,ಆ.21: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ (ಇಸಿಇ) ವಿಭಾಗದ ವತಿಯಿಂದ ಮುಂದಿನ ಪೀಳಿಗೆಯ ಸಂವಹನ ಮತ್ತು ಮಾಹಿತಿ ಸಂಸ್ಕರಣೆ ಕುರಿತ 2ನೇ ಅಂತರರಾಷ್ಟ್ರೀಯ ಐಇಇಇ ಐಎನ್‍ಸಿಐಪಿ-2026 ಸಮ್ಮೇಳನವನ್ನು ಇಂದು ಉದ್ಘಾಟಿಸಲಾಯಿತು. ಎರಡು ದಿನಗಳ ಸಮ್ಮೇಳನದಲ್ಲಿ ದೇಶ-ವಿದೇಶಗಳ ಸಂಶೋಧಕರು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಉದ್ಯಮ ಪರಿಣಿತರು, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಯುವ ಸಂಶೋಧಕರು ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಿಕೊಂಡು ಸಮಾಜದ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದು ಕರೆ ನೀಡಿದರು. ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನಗಳು ಮಾನವ ಸೃಜನಶೀಲತೆ, ನೈತಿಕ ಸಂಶೋಧನೆ ಮತ್ತು ಸ್ವತಂತ್ರ ಚಿಂತನೆಯನ್ನು ಬಲಪಡಿಸುವ ಸಾಧನಗಳಾಗಬೇಕು, ಅವು ಮಾನವನ ಚಿಂತನೆ ಮತ್ತು ಸೃಜನಶೀಲತೆಯನ್ನು ಬದಲಿಸುವಂತಾಗಬಾರದು ಎಂದು ಹೇಳಿದರು.
ಸಮಾಜ ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಗುರುತಿಸಿ, ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳು ಮತ್ತು ಸಂಶೋಧನೆಗಳ ಮೂಲಕ ಜನಜೀವನಕ್ಕೆ ಉಪಯುಕ್ತ ಪರಿಹಾರಗಳನ್ನು ರೂಪಿಸುವ ಜವಾಬ್ದಾರಿ ಯುವ ಸಂಶೋಧಕರ ಮೇಲಿದೆ. ನಮ್ಮ ಸಂಶೋಧನೆ ಪ್ರಯೋಗಾಲಯಗಳಿಗೆ ಸೀಮಿತವಾಗದೆ, ಸಮಾಜದ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಂತಿರಬೇಕು ಎಂದು ಅವರು ಹೇಳಿದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಪೆÇ್ರ. ಶ್ರೀನಿವಾಸ್ ತಲಾಬಟ್ಟುಲ ಮುಖ್ಯ ಭಾಷಣ ಮಾಡಿದ ಅವರು ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನ, ನೆಟ್‍ವಕಿರ್ಂಗ್ ವ್ಯವಸ್ಥೆಗಳು ಹಾಗೂ ಕೋಟ್ಯಂತರ ಬಳಕೆದಾರರಿಗೆ ಸಮರ್ಥ ಸಂವಹನ ಸೇವೆಗಳನ್ನು ಒದಗಿಸುವ ಸವಾಲುಗಳ ಕುರಿತು ವಿವರಿಸಿದರು. ವೇಗವಾಗಿ ಬದಲಾಗುತ್ತಿರುವ ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವ ಸಂಶೋಧಕರು ಹೊಸ ಅವಕಾಶಗಳನ್ನು ಗುರುತಿಸಿ, ಭವಿಷ್ಯದ ತಂತ್ರಜ್ಞಾನಗಳ ಕುರಿತು ಆಳವಾದ ಅಧ್ಯಯನ ನಡೆಸಬೇಕು ಎಂದು ಅವರು ಕರೆ ನೀಡಿದರು. ಇಂತಹ ಅಂತರರಾಷ್ಟ್ರೀಯ ಸಮ್ಮೇಳನಗಳು ಯುವ ಸಂಶೋಧಕರಿಗೆ ಹೊಸ ತಂತ್ರಜ್ಞಾನಗಳ ಪರಿಚಯ, ಜಾಗತಿಕ ಸಂಶೋಧನಾ ಪ್ರವೃತ್ತಿಗಳ ಅರಿವು ಮತ್ತು ಸಂಶೋಧನೆಗೆ ಹೊಸ ದಿಕ್ಕು ನೀಡುವ ಮಹತ್ವದ ವೇದಿಕೆಯಾಗಿವೆ ಎಂದು ಹೇಳಿದರು.
ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ತಿರುವನಂತಪುರಂನ ಪ್ರಾಧ್ಯಾಪಕ ಡಾ. ಚಿನ್ಮಯ್ ಸಹಾ ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ಮತ್ತು ಯುವ ಸಂಶೋಧಕರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಸಂಶೋಧನಾ ಜ್ಞಾನ ಮತ್ತು ಅನುಭವವನ್ನು ವಿಸ್ತರಿಸಿಕೊಳ್ಳಬೇಕು. ಸಂಶೋಧನೆಯಲ್ಲಿ ಕೃತಕ ಬುದ್ಧಿಮತ್ತೆ ಯನ್ನು ನೈತಿಕವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸಬೇಕು. ಂI ಒಂದು ಸಹಾಯಕ ಸಾಧನವಾಗಿದ್ದು, ಅದು ಹೊಸ ಆಲೋಚನೆ, ಸೃಜನಶೀಲತೆ ಮತ್ತು ಸ್ವತಂತ್ರ ಚಿಂತನೆಯನ್ನು ಕುಂಠಿತಗೊಳಿಸುವಂತಾಗಬಾರದು ಎಂದು ಅವರು ತಿಳಿಸಿದರು.
ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರವು ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ರಫ್ತು ವೃದ್ಧಿ ಹಾಗೂ ಡಿಜಿಟಲ್ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ಪೇಜರ್ ಯುಗದಿಂದ ಸ್ಮಾರ್ಟ್‍ಫೆÇೀನ್, 5ಜಿ ಮತ್ತು 6ಜಿ ತಂತ್ರಜ್ಞಾನಗಳವರೆಗೆ ಸಂವಹನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಇಂದು ಐಸಿಟಿಕ್ಷೇತ್ರವು ಭಾರತದ ಜಿ.ಡಿ.ಪಿಗೆ ಗಣನೀಯ ಕೊಡುಗೆ ನೀಡುವುದರ ಜೊತೆಗೆ ಲಕ್ಷಾಂತರ ಉದ್ಯೋಗಾವಕಾಶ, ರಪ್ತು ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯಾಗಿದೆ ಎಂದು ಹೇಳಿದರು. ವಿಕಸಿತ ಭಾರತದ @2047 ಗುರಿ ಸಾಕಾರಗೊಳಿಸುವಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದ ಸಂಶೋಧನೆ, ನಾವೀನ್ಯತೆ ಮತ್ತು ಕೌಶಲ್ಯಾಭಿವೃದ್ಧಿ ಅತ್ಯಂತ ಪ್ರಮುಖವಾಗಿದ್ದು, ಯುವ ಸಂಶೋಧಕರು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಎಂಜಿನಿಯರಿಂಗ್‍ನ ನಿಕಾಯದ ಡೀನ್ ಪೆÇ್ರ. ಎಂ. ಅಮರೇಂದ, ಇಸಿಇ ವಿಭಾಗದ ಮುಖ್ಯಸ್ಥ ಹಾಗೂ ಜನರಲ್ ಚೇರ್ ಪೆÇ್ರ. ಪ್ರಮೋದ್ ಕುಮಾರ್ ಸ್ವಾಗತಿಸಿದರು. ಪೆÇ್ರ. ಪರಮೇಶ್ ಎಸ್. ಪಿ. ಅವರು ಎರಡು ದಿನಗಳ ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಹಣಕಾಸು ಚೇರ್ ಡಾ. ನೃಸಿಂಘ ಚರಣ್ ಪ್ರಧಾನ ವಂದಿಸಿದರು. ಕಾರ್ಯಕ್ರಮವು ವಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡು ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಯಾಯಿತು.
ಈ ಸಂದರ್ಭದಲ್ಲಿ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಅವರು ಸೇರಿದಂತೆ ಗಣ್ಯರ ಸಮ್ಮೇಳನದ ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್‍ನ ನಿಕಾಯದ ಪ್ರಾಧ್ಯಾಪಕರುಗಳಾದ ಪೆÇ್ರ. ವೀರೇಶ್ ಜಿ. ಕಾಸಬೇಗೌಡರ್, ಡಾ. ಲಾಯಕ್ ಅಲಿ, ಡಾ. ಪರಮೇಶ್ ಎಸ್. ಪಿ., ಡಾ. ನಾಗರಾಜ ಯಮನಕ್ಕನವರ್, ಡಾ. ಮಲ್ಲಿಕಾರ್ಜುನ ಆನಂದಳ್ಳಿ, ಪೆÇ್ರ. ಚಿಂತಲಪುಡಿ ವಿ. ಸುರೇಶ್, ಡಾ. ಎಂ. ಪಾಂಡುರಂಗ ರಂಗ ಪ್ರಸಾದ್, ಡಾ. ಅರುಣಕುಮಾರ್ ಪಾಟೀಲ್, ಡಾ. ಸಂತೋಷ ಕುಮಾರ್ ಎ., ಡಾ. ಪೆದ್ದೀಟಿ ಸುಧೀರ್ ಹಾಗೂ ಡಾ. ಉದಯ್ ಪಾಟೀಲ್ ಸೇರಿದಂತೆ ದೇಶದ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಆಹ್ವಾನಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.