
ಬೀದರ:ಜೂ.೧:ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಈPಂI) ಬೀದರ ಶಾಖೆಯಲ್ಲಿ “ವಿಶ್ವ ಋತುಚಕ್ರ ನೈರ್ಮಲ್ಯ ದಿನ” ಕುರಿತು ಹದಿಹರೆಯದ ಯುವತಿಯರಿಗೆ/ಆಶಾ ಕಾರ್ಯಕರ್ತೆಯರಿಗೆ ಅರಿವು/ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಬೀದರನ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಾದ (ಅಆPಔ) ಶ್ರೀಮತಿ ರೂಪಾ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿ, “ಜೀವ ಸೃಷ್ಟಿಯ ಮೂಲಕ್ರಿಯೆಯಾದ ಋತುಚಕ್ರ (ಮುಟ್ಟು) ಜೀವಜಗತ್ತನ್ನು ಮುಂದುವರೆಸಲು ಅತ್ಯಗತ್ಯವಾದ ಒಂದು ಕ್ರಿಯೆಯಾಗಿದೆ. ಆದ್ದರಿಂದಲೇ ಋತುಚಕ್ರದ ಕುರಿತು ಅರಿವು ಮೂಡಿಸಲು ಪ್ರತಿವರ್ಷ ಮೇ ೨೮ ರಂದು “ಋತುಚಕ್ರ ನೈರ್ಮಲ್ಯ ದಿನ” ಆಚರಣೆ ಮಾಡುವುದರ ಮುಖಾಂತರ ಪ್ರತಿಯೊಬ್ಬರು ಈ ಋತುಚಕ್ರದ ವೈಜ್ಞಾನಿಕ ಪ್ರಕ್ರಿಯೆಯ ಬಗ್ಗೆ ಅರಿತುಕೊಳ್ಳಬೇಕು. ಸಮಾಜದಲ್ಲಿ ಋತುಚಕ್ರದ ಬಗ್ಗೆ ಸ್ನೇಹಪರ ವಾತಾವರಣ ಮೂಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ ಬಹು ಮುಖ್ಯವಾಗಿದೆ. ಋತುಚಕ್ರ ಪ್ರಕೃತಿ ಮಹಿಳೆಯರಿಗೆ ನೀಡಿರುವ ಒಂದು ವರದಾನವಾಗಿದೆ “ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಪಾಟೀಲ್ ಇವರು ಮುಟ್ಟಿನ ಕುರಿತು ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ತೊಡೆದುಹಾಕಿ, ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. “ಸ್ವಚ್ಛತೆಯೇ ಆರೋಗ್ಯದ ಮೂಲ” ಎಂಬ ಮಾತಿನಂತೆ ನೈರ್ಮಲ್ಯವನ್ನು ಪಾಲಿಸಿ, ಎಲ್ಲ ಹದಿಹರೆಯದ ಕಿಶೋರಿಯರು ಹಾಗೂ ಮಹಿಳೆಯರು ಆರೋಗ್ಯವಂತರಾಗಿರಿ ಎಂದು ಕರೆ ನೀಡಿದರು.
ಈPಂI ಕೇಂದ್ರ ಕಛೇರಿಯ ಮಾಜಿ ಖಜಾಂಚಿಗಳು ಹಾಗೂ ಸ್ತ್ರೀರೋಗ ತಜ್ಞರಾದ ಡಾ. ಆರತಿ ರಘು ಇವರು “ಹದಿಹರೆಯದ ಹೆಣ್ಣುಮಕ್ಕಳ ದೈಹಿಕ ಬದಲಾವಣೆ ಕುರಿತು, ಋತುಚಕ್ರ ಎಂದರೇನು?, ಋತುಚಕ್ರದ ಅವಧಿ, ಮುಟ್ಟಿನ ಸಮಯದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್ಸ್, ಬಟ್ಟೆ, ಟ್ಯಾಂಪೂನ್ಸ್ ಹಾಗೂ ಮೆನೆಸ್ಟçಲ್ ಕಪ್ ಇವುಗಳ ಬಳಕೆಯ ಕುರಿತು ಹಾಗೂ ಋತುಚಕ್ರದ ಸಮಯದಲ್ಲಿನ ವೈಯಕ್ತಿಕ ಶುಚಿತ್ವ ಹಾಗೂ ಪೌಷ್ಟಿಕ ಆಹಾರದ ಕುರಿತು ಹಾಗೂ ಊPಗಿ ವ್ಯಾಕ್ಸಿನ್ ಕುರಿತು” ವಿವರವಾದ ಮಾಹಿತಿ ತಿಳಿಸಿದರು. ಹಾಗೂ ಮಹಿಳೆಯರು ಋತುಚಕ್ರದ ಬಗ್ಗೆ ಸರಿಯಾದ ಅರಿವು ಮಾಹಿತಿ ಪಡೆದುಕೊಂಡು ಆತ್ಮವಿಶ್ವಾಸದಿಂದ ಮುಟ್ಟಿನ ದಿನಗಳನ್ನು ನಿರ್ವಹಣೆ ಮಾಡಬೇಕು” ಎಂದು ಕರೆ ನೀಡಿದರು.
ಈPಂI- ಬೀದರ ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಇವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಹಾಗೂ ಋತುಚಕ್ರ ಶುಚಿತ್ವ ದಿನದ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರಿಗೂ ಸ್ವಾಗತ ಕೋರಿದರು.
ಬೀದರನ ಅರಳು ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುನೀತಾ ಮೇರಿಲ್ ಇವರು ಮಾತನಾಡಿ, “ವಿಜ್ಞಾನ ತಂತ್ರಜ್ಞಾನ ವಿಷಯದಲ್ಲಿ ಜಗತ್ತು ಅಭಿವೃದ್ಧಿ ಕಂಡರೂ ಮಹಿಳೆಯರ ನೈಸರ್ಗಿಕವಾದ ಋತುಚಕ್ರದ ಕಾಳಜಿ, ಶುಚಿತ್ವದ ಬಗ್ಗೆ ಅರಿವಿನ ಕೊರತೆ ಹೊಂದಿದೆ. ಋತುಚಕ್ರದ ಕುರಿತು ಮೌನ ಮುರಿದು, ಇದರ ಬಗ್ಗೆ ಸರ್ಕಾರ, ಸಂಘ-ಸAಸ್ಥೆಗಳು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. “ಋತುಚಕ್ರವು ನೈಸರ್ಗಿಕವಾದ ಜೀವನದ ಸಾಮಾನ್ಯ ಸಂಗತಿ” ಎಂದು ತಿಳಿದು ಹದಿಹರೆಯದ ಕಿಶೋರಿಯರು ಹಾಗೂ ಮಹಿಳೆಯರು ಆರೋಗ್ಯ ಹಾಗೂ ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಭಾಗಾರ್ಥಿಗಳಿಗೆ ಕರೆ ನೀಡಿದರು.
ಈPಂI- ಬೀದರ ಶಾಖೆಯ ಕಾರ್ಯಕ್ರಮ ಅಧಿಕಾರಿಯಾದ ವಿಜಯಲಕ್ಷಿö್ಮ ಹುಡುಗೆ ಇವರು ನಿರೂಪಣೆ ಮಾಡಿ ವಂದನಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ೬೦ಕ್ಕೂ ಅಧಿಕ ಹದಿಹರೆಯದ ಯುವತಿಯರು/ ಆಶಾ ಕಾರ್ಯಕರ್ತೆಯರು ಋತುಚಕ್ರ ಶುಚಿತ್ವ/ನೈರ್ಮಲ್ಯ ಕುರಿತು ಅರಿವು/ಮಾಹಿತಿ ಪಡೆದುಕೊಂಡರು.
ಹಾಗೂ ಸಾಯಂಕಾಲ ಈPಂI ಸಂಸ್ಥೆಯ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಬೀದರನ ಗುಂಪಾ ಏರಿಯಾದಲ್ಲಿರುವ ಮೆಟ್ಟಿಕ್ ನಂತರದ ಮಹಿಳಾ ವಸತಿನಿಲಯದಲ್ಲಿ “ವಿಶ್ವ ಋತುಚಕ್ರ ನೈರ್ಮಲ್ಯ ದಿನ” ಕುರಿತು ಹದಿಹರೆಯದ ವಿದ್ಯಾರ್ಥಿನಿಯರಿಗೆ ಅರಿವು/ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈPಂI ಸಂಸ್ಥೆಯ ಕಾರ್ಯಕಾರಿಣಿ ಸಭೆಯ ಸದಸ್ಯರಾದ ಡಾ. ಎ.ಸಿ. ಲಲಿತಮ್ಮಾ ಇವರು ಋತುಚಕ್ರ ಶುಚಿತ್ವದ ಕುರಿತು ವಿವರವಾದ ಮಾಹಿತಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಈPಂI- ಬೀದರ ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ, ವೈದ್ಯರಾದ ಡಾ. ಚಿನ್ನಮ್ಮ ಬಿರಾದಾರ, ಕಾರ್ಯಕ್ರಮ ಅಧಿಕಾರಿಯಾದ ವಿಜಯಲಕ್ಷಿö್ಮ ಹುಡುಗೆ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿಯಾದ ಶ್ರೀಮತಿ ಸೋನಿಕಾ ಇವರುಗಳು ಕಾರ್ಯಕ್ರಮದ ಕುರಿತು ಮಾತನಾಡಿದರು. ಹಾಗೂ ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ಮಾಡಿ, ಚಿಕಿತ್ಸೆ ನೀಡಿ, ಸೂಕ್ತ ಔಷಧಿಗಳನ್ನು ಕೊಡಲಾಯಿತು.
ಈ ಕಾರ್ಯಕ್ರಮದಲ್ಲಿ ೯೦ಕ್ಕೂ ಅಧಿಕ ವಿದ್ಯಾರ್ಥನಿಯರು ಋತುಚಕ್ರ ಶುಚಿತ್ವ/ನೈರ್ಮಲ್ಯ ಕುರಿತು ಅರಿವು/ಮಾಹಿತಿ ಪಡೆದುಕೊಂಡರು.






























