
ಕಲಬುರಗಿ,ಜೂ 25: ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ದೀರ್ಘಕಾಲದಿಂದ ಕಾಡುತ್ತಿರುವ ಶಿಕ್ಷಕರ ಕೊರತೆ ನಿಗಿಸಬೇಕೆಂಬ ಒಂದೇ ಕಾರಣದಿಂದ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಸಚಿವರು ಇಲ್ಲದೆ ಇರುವ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜುಗಳಉಪನ್ಯಾಸಕರಿಗೆ ಹೆಚ್ಚುವರಿ ಹೊಣೆ ನೀಡಲು ಮುಂದಾಗಿರುವುದು ಅತ್ಯಂತ ಅವೈಜ್ಞಾನಿಕ ನಿರ್ಧಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಅಭಿಪ್ರಾಯ ಪಟ್ಟಿದ್ದಾರೆ.
ಇನ್ಮುಂದೆ ಪದವಿಪೂರ್ವ ಕಾಲೇಜು ಉಪನ್ಯಾಸಕರು ತಮಗಿಷ್ಟವಿರಲಿ ಬಿಡಲಿ 9, 10 ನೇರ ತರಗತಿಗಳಿಗೆ ಕಡ್ಡಾಯವಾಗಿಬೋಧನೆ ಮಾಡಬೇಕೆಂದು ಸರ್ಕಾರ ತುರ್ತಾಗಿ ವಿಶೇಷ ರಾಜ್ಯಪತ್ರವನ್ನು ಜೂನ್ 18 ರಂದು ಹೊರಡಿಸಿದೆಇದರಿಂದಾಗಿ ನೇರ ನೇಮಕಾತಿ ಹಾಗೂ ಬಡ್ತಿ ಹೊಂದಿದ ಸಾವಿರಾರು ಉಪನ್ಯಾಸಕರಿಗೆ ದೊಡ್ಡ ಆಘಾತ ನೀಡುತ್ತದೆ.ಕರ್ನಾಟಕ ಸಾಮಾನ್ಯ ಸೇವೆಗಳು ಪದವಿಪೂರ್ವ ಶಿಕ್ಷಣ ಇಲಾಖೆ ವೃಂದ ನೇಮಖಾತಿ ನಿಯಮಗಳು 2013 ಕ್ಕೆ ತಿದ್ದುಪಡಿತರುವುದರ ಮೂಲಕ ಇದರ ಅನ್ವಯ ಸರ್ಕಾರ ನಿಗದಿಪಡಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಪಿಯು ಉಪನ್ಯಾಸಕರು ಪ್ರೌಢಶಾಲಾಹಂತದ ವಿದ್ಯರ್ಥಿಗಳಿಗೆ ಪಾಠ ಮಾಡಬೇಕಾಗುತ್ತದೆ.ಆದರೆ ಹಳೆಯ ನಿಯಮಾವಳಿಗಳ ಪ್ರಕಾರ ಪಿಯು ಉಪನ್ಯಾಸಕರಿಗೆಕೇವಲ ಪ್ರಥಮ ಹಾಗೂ ದ್ವೀತಿಯ ತರಗತಿಗಳಿಗೆ ಮಾತ್ರ ಭೋಧಿಸುವ ಹಕ್ಕು ಮತ್ತು ಜವಾಬ್ಧಾರಿ ಇತ್ತು.ಆದರೆ ಈಗಿನತಿದ್ದುಪಡಿಯಿಂದಾಗಿ ಹೈಸ್ಕೂಲ್ ಹಂತಕ್ಕೂ ಇವರ ಸೇವೆ ವಿಸ್ತರಣೆಯಾಗಲಿದೆ.ಈ ನಿಯಮ ಜಾರಿಯಾದರೆ ಈಗಾಗಲೇ
ಪ್ರೌಢಶಾಲೆಗಳಿಗೆ ನೇಮಕವಾದ ಶಿಕ್ಷಕರಿಗೂ ಕೆಲಸ ಕೈ ತಪ್ಪುವ ಆತಂಕವಿದೆ.
ಇಷ್ಟೆ ಅಲ್ಲ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು 9 ಹಾಗೂ 10 ನೇ ತರಗತಿಗೆ ಬೋಧನೆ ಮಾಡಿದರೆ ಶೈಕ್ಷಣಿಕಹಂತಗಳ ವೈಜ್ಞಾನಿಕ ವಿನ್ಯಾಸಕ್ಕೆ ಧಕ್ಕೆಯುಂಟಾಗಲಿದೆ. ಪದವಿಪೂರ್ವ ಉಪನ್ಯಾಸಕರು ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಕೋರ್ಸ್ ವಿದ್ಯಾರ್ಹತೆ ಹೊಂದಿದ್ದು, ಗೆಜೆಟೆಡ್-ಬಿ ವೃಂಧದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹುದ್ದೆಯಲ್ಲಿಪ್ರೌಢಶಾಲಾ ದ ಶಿಕ್ಷಕರು ಪದವಿ ಮತ್ತು ಬಿ.ಇಡಿ ಆಧಾರದಲ್ಲಿ ಗ್ರೂಪ್-ಸಿ ಹುದ್ದೆಯಲ್ಲಿದ್ದಾರೆ. ಈ ಎರಡು ಹುದ್ದೆಗಳನೇಮಕಾತಿ, ವೇತನ ಶ್ರೇಣಿ ಹಾಗೂ ಎ ಆಡಳಿತಾತ್ಮಕ ಹಕ್ಕುಗಳಲ್ಲಿ ವ್ಯತ್ಯಾಸಗಳಿದ್ದು,
ಇದು ಉಪನ್ಯಾಸಕರ ವೃತ್ತಿಜೀವನದ ಗೌರವಕ್ಕೆ ಧಕ್ಕೆ ತರುತ್ತದೆ .
ಈ ವಿಶೇಷ ರಾಜ್ಯಪತ್ರ ಹೊರಡಿಸಬೇಕಾದರೆ ಸರಕಾರವು ಶಿಕ್ಷಣ ತಜ್ಞರ ಸಲಹೆ ಪಡೆಯಬೇಕಾಗಿತ್ತು., ಶಿಕ್ಷಕರ ಕ್ಷೇತ್ರದ,ಪದವಿಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರ ಜೋತೇ ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಜತೆ ಸಭೆನಡೆಸಬೇಕಾಗಿತ್ತು. ಯಾವುದೆ ಸಲಹೆ ಸೂಚನೆ ಇಲ್ಲದೆ ಏಕಾಏಕಿ ನಿರ್ಣಯ ತೆಗೆದುಕೊಳ್ಳುವದು ಎಷ್ಟು ಸಮಂಜಸಈಗಾಗಲೇ 16 ಗಂಟೆ ಇದ್ದ ಕಾರ್ಯಭಾರದ ಅವಧಿಯನ್ನು 20 ಗಂಟೆಗೆ ಹೆಚ್ಚಿಸಲಾಗಿದೆ. ಈಗ 9 ಹಾಗೂ 10ನೇ ತರಗತಿಗೆಬೋಧನೆ ಮತ್ತಷ್ಟು ಹೊರೆಯಾಗಲಿದೆ. ಇಂತಹ ಅವೈಜ್ಞಾನಿಕ ರಾಜ್ಯ ಪತ್ರ ಹೊರಡಿಸಿ 7 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲೂಸೂಚಿಸಿದೆ ಒಟ್ಟಾರೆಯಾಗಿ ಹೇಳಬೇಕೆಂದರೆ ಈ ರಾಜ್ಯ ಪತ್ರವೆ ಅವೈಜ್ಞಾನಿಕ ಹಾಗೂ ಉಪನ್ಯಾಸಕರ ಘನತೆಗೆ ಕುಂದುತರುವಂತಾಗಿದ್ದು ಕೂಡಲೇ ಇದನ್ನು ಹಿಂತೆಗೆದುಕೊಂಡು ಹಿಂದಿನ ನಿಯಮಾವಳಿಗಳನ್ನೆ ಮುಂದುವರೆಸುವದು ಸೂಕ್ತವಾಗಿದೆ
ಎಂದು ಈಗಾಗಲೆ ನಾನು ಖುದ್ದಾಗಿ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ರಶ್ಮೀ ಅವರಿಗೆ ಕರ್ನಾಟಕ ವಿಶೇಷ ರಾಜ್ಯಪತ್ರ ಇಪಿ9ಡಿಪಿಐ ದಿನಾಂಕ ಜೂನ್ 18ರ ಕರಡು ತಿದ್ದುಪಡಿಗಳಿಗೆ ಕೂಡಲೇ ರದ್ದುಪಡಿಸಬೇಕೆಂದು ಮನವಿ ಸಲ್ಲಿಸಿದ್ದೇನೆ. ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಮುಂದಿನ ಹೋರಾಟಗಳಿಗೆ ನಾನು ಸಹ ಬೆಂಬಲಿಸಲಿದ್ದೇನೆ ಎಂದಿದ್ದಾರೆ



























