
ಕೆ ಆರ್ ನಗರ ಪಟ್ಟಣದ ೩ನೇ ವಾರ್ಡ್ ಗಣಪತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಮಿರ್ಲೆ ವರದರಾಜ್ ರವರು ಸಸಿ ನೆಟ್ಟರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಹೊಸೂರು ಧರ್ಮ ಹಾಗೂ ಕೆ ಆರ್ ನಗರ ಟೌನ್ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಂಜೇಗೌಡರು, ಮಂಡಲ ಕಾರ್ಯಕಾರಿಣಿ ಸದಸ್ಯ ಜಗದೀಶ್, ಮಂಡಲ ಎಸ್ ಸಿ ಮೋರ್ಚಾ ಅಧ್ಯಕ್ಷ ಕೆ. ಆರ್. ಮಂಜು, ತಿಪ್ಪುರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾದೇವ, ಮಂಡಲ ಕಾರ್ಯದರ್ಶಿ ಸೌಮ್ಯ, ವೃಷಬೆಂದ್ರಪ್ಪ, ಮಾಯಣ್ಣ, ಮಂಡಲ ಖಜಾಂಚಿ ಪುರುಷೋತ್ತಮ್ ಉಪಸ್ಥಿತರಿದ್ದರು.



























