
ಕಲಬುರಗಿ,ಜೂ 25: ನಗರದ ಪ್ರತಿಷ್ಠಿತ ಎಸ್. ಆರ್. ಎನ್. ಮೆಹ್ತಾ ಸಿ.ಬಿ.ಎಸ್.ಇ ಶಾಲೆಯಲ್ಲಿ ಪ್ರಸ್ತುತ ಪಡಿಸಲಾದ ಅದ್ಭುತ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಿವಿಲ್ ಸರ್ವಿಸ್ ಅಧ್ಯಯನ ಸಾಮಗ್ರಿ ಬಿಡುಗಡೆ ಮಾಡಿ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸಲು ಅವರು ಆಗಮಿಸಿದ್ದರು. ವಿದ್ಯಾರ್ಥಿಗಳ ಜೊತೆ ಚರ್ಚೆ ಮಾಡುತ್ತಾ ಅಧ್ಯಯನದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟು ಮಾರ್ಗದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್. ಆರ್. ಎನ್. ಮೆಹ್ತಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‍ನ ಚೇರ್‍ಮನ್ ಪ್ರೀತಮ್ ಮೆಹ್ತಾ ಅವರು ಹಾಗೂ ವ್ಯವಸ್ಥಾಪಕರಾದ ಚಕೋರ್ ಮೆಹ್ತಾ ಅವರು ಹಾಗೂ ಶಾಲೆಯ ಪ್ರಾಂಶುಪಾಲರಾದ ರಾಜಶೇಖರ ರೆಡ್ಡಿ ಅವರು ಮತ್ತು ಸಿಬ್ಬಂದಿವರ್ಗದವರರು ಪಾಲ್ಗೊಂಡರು.
























