ಕಲಬುರಗಿ: ಆರ್‍ಎಸ್‍ಎಸ್ ನೋಂದಣಿ ವಿಚಾರದ ಬಗ್ಗೆ ಗೃಹಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದ್ದಕ್ಕೆ ಕೆಲವು ಬಿಜೆಪಿ ಸಂಸದರು,ಮಾಜಿ ಸಚಿವರ ಆಕ್ಷೇಪ, ವೈಯಕ್ತಿಯ ನಿಂದನೆಯನ್ನು ಖಂಡಿಸಿ,ಆರ್‍ಎಸ್‍ಎಸ್ ನೋಂದಣಿಗಾಗಿ ಆಗ್ರಹಿಸಿ ಇಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ದೇವೀಂದ್ರ ಸಿನ್ನೂರ,ಮಲ್ಲಪ್ಪ ಹೊಸಮನಿ,ದಿನೇಶ ದೊಡ್ಡಮನಿ,ಅಶೋಕ ವೀರನಾಯಕ ಅವರು ಸೇರಿದಂತೆ ಹಲವರು ಪಾಲ್ಗೊಂಡರು.