
ಜೇವರ್ಗಿ,ಜೂ.25-ತಾಲ್ಲೂಕಿನ ನೇದಲಗಿ ಬಳಿ ಬುಧವಾರ ದ್ವಿಚಕ್ರ ವಾಹನ ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ಸಿಂದಗಿ ತಾಲ್ಲೂಕಿನ ದೇವರನಾವದಗಿ ಗ್ರಾಮದ ನಿರ್ಮಲಾ ಕಲ್ಲಪ್ಪ ಸಿಂದಗಿ (40) ಮೃತರು.
ಜೇವರ್ಗಿಯಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬೈಕ್ ಮೇಲೆ ಮರಳಿ ದೇವರನಾವದಗಿಗೆ ತೆರಳುವ ಸಂದರ್ಭದಲ್ಲಿ ನೇದಲಗಿ ಕ್ರಾಸ್ ಹತ್ತಿರ ಅಪಘಾತ ಸಂಭವಿಸಿದೆ. ಕೆಲವರು ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪಿಎಸ್‍ಐ ಚಿದಾನಂದ ಸವದಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ನೆಲೋಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























