
ಸೇಡಂ: ಮನೆ ಮನೆಗೆ ಹೋಗಿ ಮತದಾರ ಪಟ್ಟಿಯಲ್ಲಿನ ಹೆಸರು ಖಾತರಿ ಮಾಡಿಕೊಂಡು ಫಾರಂ ತುಂಬಿ ವಾಪಸ್ಸು ಕೊಡಬೇಕು. ಎಷ್ಟೇ ದೊಡ್ಡವರಾಗಿದ್ರು, ಶಾಸಕರಾಗಿದ್ರು ಎಸ್.ಐ.ಆರ್ ಫಾರಂ ಮಾಹಿತಿ ನೀಡಲೆಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ಕೆ.ಎನ್.ಜೆಡ್ ಫಂಕ್ಷನ್ ಹಾಲ್‍ನಲ್ಲಿ ನಡೆದ ಎಸ್.ಐ.ಆರ್. ಕುರಿತು ಬಿಎಲ್‍ಓ ಗಳ ಕಾರ್ಯಗಾರವನ್ನು ಉದ್ಘಾಟಿಸಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು.ನಂತರ ಕಾರ್ಯಗಾರ ಕುರಿತು ಸುಧೀರ್ಘವಾಗಿ ಮಾತನಾಡಿದ ಜಾಗೃತ ಕರ್ನಾಟಕದ ಪೃಥ್ವಿ ಅವರು ಎಸ್.ಐ.ಆರ್ ಕುರಿತು ಪಿಪಿಟಿ ಜೊತೆಗೆ ಒಳಸುಳಿಗಳ ಕುರಿತು ಮಾತನಾಡಿದರು. ಈ ವೇಳೆಯಲ್ಲಿ ಪಕ್ಷದ ವಿವಿಧ ಮುಖಂಡರು ಇದ್ದರು.



























