Home Uncategorized ಯಾದಗಿರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಶೇ.೧೦೦ ಎಣಿಕೆ ನಮೂನೆ ವಿತರಣೆ, ಶೇ.೨೩.೦೬ ಡಿಜಿಟೈಸೇಷನ್ ಪೂರ್ಣ

ಯಾದಗಿರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಶೇ.೧೦೦ ಎಣಿಕೆ ನಮೂನೆ ವಿತರಣೆ, ಶೇ.೨೩.೦೬ ಡಿಜಿಟೈಸೇಷನ್ ಪೂರ್ಣ

ಯಾದಗಿರಿ:ಜು.೧೩: ಜಿಲ್ಲೆಯಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Sಠಿeಛಿiಚಿಟ Iಟಿಣeಟಿsive ಖevisioಟಿ – SIಖ) ಕಾರ್ಯ ಚುರುಕುಗೊಂಡಿದ್ದು, ಮನೆ-ಮನೆಗೆ ಭೇಟಿ ನೀಡುತ್ತಿರುವ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಎಣಿಕೆ ನಮೂನೆ (ಇಟಿumeಡಿಚಿಣioಟಿ ಈoಡಿm – ಇಈ) ವಿತರಣೆ ಹಾಗೂ ಡಿಜಿಟೈಸೇಷನ್ ಕಾರ್ಯವನ್ನು ವೇಗವಾಗಿ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ತಿಳಿಸಿದ್ದಾರೆ.
ಕಳೆದ ಜೂನ್ ೩೦ರಿಂದ ಆರಂಭಗೊAಡಿರುವ ಮನೆ-ಮನೆ ಸಮೀಕ್ಷೆ ಹಾಗೂ ಎಣಿಕೆ ನಮೂನೆ ವಿತರಣೆ ಕಾರ್ಯ ಜುಲೈ ೨೯ರವರೆಗೆ ನಡೆಯಲಿದ್ದು, ಮತದಾರರ ಮಾಹಿತಿಯನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವ ಪ್ರಕ್ರಿಯೆಯೂ ಸಮಾನಾಂತರವಾಗಿ ಸಾಗುತ್ತಿದೆ.
ಜೂನ್ ೧೬ರ ಅಂಕಿ-ಅAಶಗಳ ಪ್ರಕಾರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಟ್ಟು ೧೦,೫೩,೨೩೬ ಮತದಾರರಿದ್ದು, ಎಲ್ಲರಿಗೂ ಶೇ.೧೦೦ರಷ್ಟು ಎಣಿಕೆ ನಮೂನೆಗಳನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಇದುವರೆಗೆ ೨,೪೨,೮೬೨ ನಮೂನೆಗಳು, ಅಂದರೆ ಶೇ.೨೩.೦೬ರಷ್ಟು ಡಿಜಿಟೈಸೇಷನ್ ಪೂರ್ಣಗೊಂಡಿದ್ದು, ಅವುಗಳಲ್ಲಿ ೧,೭೯೩ ಅರ್ಜಿಗಳು ಆನ್‌ಲೈನ್ ಮೂಲಕ ಸ್ವೀಕೃತವಾಗಿವೆ. ಜೊತೆಗೆ ಜಿಲ್ಲೆಯಲ್ಲಿ ಶೇ.೯೭.೦೮ರಷ್ಟು ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ.
ತಾಲೂಕುವಾರು ಡಿಜಿಟೈಸೇಷನ್ ಪ್ರಗತಿ ಗಮನಿಸಿದರೆ, ಶಹಾಪುರ ತಾಲೂಕು ಶೇ.೩೦.೩೯ರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಗುರಮಿಟಕಲ್ ಶೇ.೨೭.೬೯, ಹುಣಸಗಿ ಶೇ.೨೬.೧೩, ವಡಗೇರಾ ಶೇ.೧೯.೨೮, ಶೋರಾಪೂರ ಶೇ.೧೮.೫೯ ಹಾಗೂ ಯಾದಗಿರಿ ತಾಲೂಕು ಶೇ.೧೬.೮೯ರಷ್ಟು ಪ್ರಗತಿ ಸಾಧಿಸಿವೆ.
ಮನೆ-ಮನೆ ಸಮೀಕ್ಷೆ ವೇಳೆ ಬಿಎಲ್‌ಒಗಳು ಒಟ್ಟು ೩,೪೨೭ ವಿಶೇಷ ಪ್ರಕರಣಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ೧,೫೨೩ ಮೃತ ಮತದಾರರು, ೧,೨೪೦ ಶಾಶ್ವತವಾಗಿ ಸ್ಥಳಾಂತರಗೊAಡವರು, ೫೯೩ ಈಗಾಗಲೇ ನೋಂದಾಯಿತರಾಗಿರುವವರು, ೫೪ ಗೈರುಹಾಜರಾದ ಮತದಾರರು ಹಾಗೂ ೧೭ ಇತರೆ ಪ್ರಕರಣಗಳು ಸೇರಿವೆ.
ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದ ಮೂಲಕ ಜಿಲ್ಲೆಯ ಅರ್ಹ ಮತದಾರರ ನಿಖರ ಹಾಗೂ ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.