
ನವಲಗುAದ,ಸೆ೧೬ : ಋಷಿ ಮುನಿಗಳು, ಸಂತರು ಸಾಧಕರು ಮೌನ ಅನುಷ್ಠಾನ ನಡೆಸುವ ಮೂಲಕ ಮಾನವ ಕುಲ ಉನ್ನತಿಗೆ ಶ್ರಮಿಸುತ್ತಾ ಬಂದಿರುವುದು ಸನಾತನ ಸಂಸ್ಕöÈತಿಯ ಸಂಪ್ರದಾಯವಾಗಿದ್ದು ಗವಿಮಠದ ಬಸವಲಿಂಗ ಸ್ವಾಮಿಗಳೂ ನಿರಂತರವಾಗಿ ಮೌನಾನುಷ್ಠಾನ ಕೈಗೊಳ್ಳುವುದರೊಂದಿಗೆ ಭಕ್ತರ ಹಾಗೂ ಧರ್ಮದ ಏಳ್ಗೆಗೆ ಶ್ರಮಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹಂಸನೂರ ಹಾಗೂ ಗೋಗೇರಿಮಠದ ಸಿದ್ದಲಿಂಗ ಸ್ವಾಮೀಜಿ ನುಡಿದರು.
ಸ್ಥಳೀಯ ಗವಿಮಠದ ದಾಸೋಹ ಭವನದಲ್ಲಿ ಶ್ರೀ ಮಠದ ಬಸವಲಿಂಗ ಸ್ವಾಮೀಜಿಯವರು ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಒಂದು ತಿಂಗಳ ಮೌನಾನುಷ್ಠಾನ ಮಂಗಲೋತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಗಡಿ-ಗುತ್ತಲ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮಿಜಿ.ಯಲಬುರ್ಗಿ ಹಿರೇಮಠದ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಅನುಷ್ಠಾನ ನಿರತ ಗವಿಮಠದ ಬಸವಲಿಂಗಸ್ವಾಮಿಜಿ ಮಾತನಾಡಿ ಸ್ವಾಮಿಗಳಾದವರು ದೇಹ ಹಾಗೂ ಮನಸ್ಸುಗಳನ್ನು ಅನುಷ್ಠಾನ ರೂಪದಲ್ಲಿ ಹಿಡಿದಿಟ್ಟುಕೊಂಡು ನಾಡಿನ ಭಕ್ತರ. ರೈತರ ಅಭಿವೃದ್ದಿಗಾಗಿ ಭಗವಂತನಲ್ಲಿ ಬೇಡಿಕೊಂಡು ಎಲ್ಲ ಜನಾಂಗದವರೂ ಸೌಹಾರ್ದಯುತವಾಗಿ ನಡೆದುಕೊಳ್ಳುವ ಮೂಲಕ ಸಮಬಾಳು ಬಾಳಲೆಂಬ ಉದ್ದೇಶ ಮೌನಾನುಷ್ಠಾನದ ಅಂಶವಾಗಿದೆ ಎಂದರು.
ಗುಡ್ಡದಾನ್ವೇರಿಯ ಶಿವಯೋಗೀಶ್ವರ ಸ್ವಾಮೀಜಿ, ಜಿಗೇರಿ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ನಂಜುAಡ ಪಂಡಿತಾರಾದ್ಯ ಸ್ವಾಮೀಜಿ, ಪಂಡಿತ ವಾಗೀಶಾರಾದ್ಯ ಸ್ವಾಮೀಜಿ , ಕುಕನೂರಿನ ಮಹದೇವ ಸ್ವಾಮೀಜಿ , ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ವೇದಿಕೆ ಮೇಲಿದ್ದರು.
ಅಣ್ಣಪ್ಪ ಬಾಗಿ ಸ್ವಾಗತಿಸಿದರು, ದೇವರಾಜ ದಾಡಿಭಾವಿ, ರೋಹಣ ಮುನೇನಕೊಪ್ಪ, ಸಿದ್ದಲಿಂಗಯ್ಯ ಹಿರೇಮಠ, ಈರಣ್ಣ ಚವಡಿ,ಸಂತೋಷ ನಾವಳ್ಳಿ, ನಿಂಗಪ್ಪ ತೋಟದ, ಶಂಭು ಸಿದ್ರಾಮಶೆಟ್ಟರ, ಎಸ್ ಬಿ ಹೂಗಾರ, ಅನೀಲ ಶಿದ್ರಾಮಶೆಟ್ಟರ, ಬೂದಪ್ಪ ಬಾಗಲಕೋಟಿ, ಬಸಲಿಂಗಯ್ಯ ಪೂಜಾರ, ಜೀವನ ಪವಾರ, ಮಲ್ಲಪ್ಪ ಚಿನ್ನಾಟಗಿ, ಬಸಪ್ಪ ಹಂಚಿನಾಳ, ಸಿದ್ದು ಪೂಜಾರ, ಎಸ್.ಎ.ಬಾರಕೇರ ಸೇರಿದಂತೆ ಅಕ್ಕಮಹಾದೇವಿ ಹಾಗೂ ಶ್ರೀ ದಾನಮ್ಮದೇವಿ ಮಹಿಳಾ ಮಂಡಳ ಸದಸ್ಯರು ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಪಾರ ಭಕ್ತ ಸಮೂಕ ಅನುಷ್ಠಾನ ನಿರತ ಶ್ರೀಬಸವಲಿಂಗ ಸ್ವಾಜಿಜಿಯವರನ್ನು ಸತ್ಕರಿಸಿದರು.




























