Home ಜಿಲ್ಲೆ ಕಲಬುರಗಿ ಪಿಡಿಒ ವಿರುದ್ಧ ಅಶ್ಲೀಲ ಪೋಸ್ಟರ್ : ಸೆ. 18 ರಂದು ಪ್ರತಿಭಟನೆ

ಪಿಡಿಒ ವಿರುದ್ಧ ಅಶ್ಲೀಲ ಪೋಸ್ಟರ್ : ಸೆ. 18 ರಂದು ಪ್ರತಿಭಟನೆ

ಕಲಬುರಗಿ,ಸೆ 16: ಫರಹತಾಬಾದ್ ಗ್ರಾಮಪಂಚಾಯತಿಯ ಮಹಿಳಾ ಪಿಡಿಒ ವಿರುದ್ಧ ಸಾರ್ವಜನಿಕವಾಗಿ ಅಶ್ಲೀಲ ಪೋಸ್ಟರ್ ಅಂಟಿಸಿದ್ದನ್ನು ಖಂಡಿಸಿ ಸೆ. 18 ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ಮಾದಿಗ ಸಮಾಜದ ವಿವಿಧ ಸಂಘಟನೆಗಳ ಒಕ್ಕೂಟದ ಮುಖಂಡ, ಶ್ರೀ ಮಾದರ ಚನ್ನಯ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಜಿನಕೇರಿ ಮತ್ತು ಹಿರಿಯ ಮುಖಂಡ ದಶರಥ ಕಲಗುರ್ತಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಲಿತ ಸಮುದಾಯಕ್ಕೆ ಸೇರಿದ ಈ ಮಹಿಳಾ ಅಧಿಕಾರಿಯ ಅವಮಾನ ಮಾಡಿದ್ದು ಕುರಿತು ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿ ಕ್ಯಾಮರಾ ದಾಖಲೆ ಪ್ರಕಾರ ಮೂವರು ಈ ಪೋಸ್ಟರ್ ಅಂಟಿಸಿದ್ದಾರೆ. ಆ ಪೈಕಿ ಇಬ್ಬರನ್ನು ವಿಚಾರಿಸಿ ಕಳಿಸಿದ್ದಾರೆ. ಇನ್ನೊಬ್ಬನನ್ನು ಬಂಧಿಸಿಲ್ಲ. ಅವರನ್ನು ಗಡಿಪಾರು ಮಾಡಬೇಕು.
ಈ ಪೋಸ್ಟರ್‍ಗಳನ್ನು ಮುದ್ರಿಸಿ ಮುದ್ರಣಾಲಯದ ಮಾಲೀಕನನನ್ನು ಹಾಗೂ ಪೋಸ್ಟರ್ ಹಚ್ಚಿದವರನ್ನು ಸಮರ್ಥಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಾಕುತ್ತಿರುವ ಇನ್ನೊಬ್ಬ ವ್ಯಕ್ತಿಯನ್ನು ಸಹ ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಈ ಕೃತ್ಯದ ಹಿಂದೆ ಬಲಿಷ್ಠ ವ್ಯಕ್ತಿಗಳು ಯಾರಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದರು.