Home ಜಿಲ್ಲೆ ವೇಲ್ಡಿಂಗ್ ಕಾರ್ಯಕ್ಕೆ ಗೃಹ ಬಳಕೆ ಸಿಲಿಂಡರ್ ಬಳಕೆ

ವೇಲ್ಡಿಂಗ್ ಕಾರ್ಯಕ್ಕೆ ಗೃಹ ಬಳಕೆ ಸಿಲಿಂಡರ್ ಬಳಕೆ

ತಾಳಿಕೋಟೆ:ಜೂ.2: ಗೃಹ ಬಳಕೆಯ ಸಿಲಿಂಡರ್‍ಗಳನ್ನು ಕೇವಲ ಮನೆಗಳಲ್ಲಿ ಅಡುಗೆ ಮಾಡಲು ಮಾತ್ರ ಬಳಸಬೇಕು. ಹೋಟೆಲ್, ಬೇಕರಿ, ಕ್ಯಾಂಟೀನ್ ಅಥವಾ ಇನ್ನಿತರ ಯಾವುದೇ ಉದ್ದೇಶಕ್ಕೆ ಬಳೆಸಬಾರದೆಂಬ ನಿಯಮ ವಿದ್ದರೂ ಕೂಡಾ ಅಕ್ರಮವಾಗಿ ಪೈಪಲೈನ್ ವೇಲ್ಡಿಂಗ್ ಕಾರ್ಯಕ್ಕೆ ಗ್ರಹ ಬಳಿಕೆ ಸಿಲಿಂಡರ್ ಬಳಿಸಿರುವದು ಪತ್ತೇಯಾಗಿದೆ.
ದೇಶದೆಲ್ಲಡೆ ಸಿಲಿಂಡರ್ ಸಿಗದೇ ಜನರು ಪರದಾಡುತ್ತಾ ಸಾಗಿದ ಸಂದಿಗ್ದ ಪರಸ್ಥಿತಿಯಲ್ಲಿ ಕಾಮಗಾರಿ ಗುತ್ತಿಗೆ ಹಿಡಿದ ಜಿವ್ಹಿಪಿಆರ್ ಕಂಪನಿಯ ಗುತ್ತಿಗೆದಾರರು ಪೈಪಲೈನ್ ಜೋಡಣೆಗೆ ಗ್ರಹ ಬಳಿಕೆ ಕಾನೂನು ಭಾಹಿರವಾಗಿ ವ್ಹೇಲ್ಡಿಂಗ್ ಮಾಡಲು ಮುಂದಾಗಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷೀ ಜಲದಾರಿ ಯೋಜನೆಯ ಪೈಪಲೈನ್ ಕಾಮಗಾರಿಯು ತಾಳಿಕೋಟೆ ಪಟ್ಟಣದ ದೇವರಹಿಪ್ಪರಗಿ ಮುಖ್ಯ ರಸ್ತೆಯಲ್ಲಿ ನಡೆದಿದ್ದು ಸದರಿ ಪೈಪ್‍ಗಳಿಗೆ ವ್ಹೇಲಿಂಡ್ ಮಾಡಲು ಕಮರ್ಷಿಯಲ್ ಸಂಬಂದಿತ ಗ್ಯಾಸ್ ಸಿಲಿಂಡರ್‍ಗಳ ಬಳೆಸುವದನ್ನು ಬಿಟ್ಟು ಅಕ್ರಮವಾಗಿ ಕಾನೂನು ಭಾಹಿರವಾಗಿ ಸಿಲಿಂಡರ್ ಬಳೆಸುತ್ತಾ ಸಾಗಿದ್ದು ಕಂಡು ಬಂದಿದೆ.
ಸಿಲಿಂಡರ್ ಹಿಡಿದು ಬಿಟ್ಟು ಕಳಿಸಿದ ಅಧಿಕಾರಿ:-
ಜಿವ್ಹಿಪಿಆರ್ ಪೈಪಲೈನ್ ಕಾಮಗಾರಿಗೆ ವ್ಹೇಲಿಂಡರ್ ಮಾಡಲು ಗ್ರಹ ಬಳಿಕೆ ಸಿಲಿಂಡರ್ ಬಳಕೆ ಮಾಡುತ್ತಿರುವ ಕುರಿತು ತಾಲೂಕಾ ಆಹಾರ ನಿರಿಕ್ಷಕ ಅಧಿಕಾರಿಗೆ ಸಾಮಾಜಿ ಕಾರ್ಯಕರ್ತ ಮಲ್ಲಿಕಾರ್ಜುನ ಆನೇಸೂರ ಅವರು ದೂರಿದಾಗ ಸ್ಥಳಕ್ಕೆ ಆಗಮಿಸದೇ ಸುಮಾರು 2 ಗಂಟೆಕಾಲ ಸತಾಯಿಸಿದ್ದರಿಂದ ಸಂಬಂದಿಸಿದ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದಾಗ ಮೇಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಾಲೂಕಾ ಆಹಾರ ನಿರಿಕ್ಷಕ ಶ್ರೀಮತಿ ಆರ್.ಎ.ಖಾದಿಂ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಮಾಡುತ್ತಿದ್ದ ಕೆಲಸಗಾರರ ಜೊತೆಗೆ ಮತ್ತು ಸಂಬಂದಿತರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಲ್ಲದೇ ಯಮರ್ಜನ್ಸಿಗಾಗಿ ಗ್ರಹ ಬಳಿಕೆ ಸಿಲಿಂಡರ್ ಬಳಿಸಿದ್ದಾರಂತೆ ಇನ್ನೊಮ್ಮೆ ಬಳೆಸಬೇಡಿ ಎಂದು ಹೇಳಿದ್ದೇನೆಂದು ಗ್ರಹ ಬಳಿಕೆಯ ಅಕ್ರಮ ಸಿಲಿಂಡರ್ ಬಳಿಕೆಗೆ ಅವಕಾಶ ಮಾಡಿಕೊಟ್ಟು ಹೋಗಿರುವದು ಅಧಿಕಾರಿಯ ನಡೆಯ ಮೇಲೆ ಅನಾಮಾನ ಹುಟ್ಟಿದೆ ಅಲ್ಲದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಯಿಂದ ಉಢಾಫೆ ಉತ್ತರ :-
ಮನೆಗಳಿಗೆ ಗ್ರಹ ಬಳಿಕೆ ಸಿಲಿಂಡರ್ ಸಿಗದೇ ಪರದಾಡುತ್ತಿರುವ ಸಮಯದಲ್ಲಿ ತಾಲೂಕಾ ಆಹಾರ ನಿರಿಕ್ಷಕರು ಪೈಪಲೈನ್ ವ್ಹೇಲ್ಡಿಂಗ್ ಕಾರ್ಯಕ್ಕೆ ಗ್ರಹ ಬಳಿಕೆ ಸಿಲಿಂಡರ್ ಅಕ್ರಮವಾಗಿ ಕಾನೂನು ಬಾಹಿರವಾಗಿ ಬಳಿಕೆ ಮಾಡುತ್ತಿರುವದು ಕಣ್ಣಿಗೆ ಕಂಡರೂ ಕೂಡಾ ಅದನ್ನು ವಶಕ್ಕೆ ಪಡೆದು ಕೇಸು ದಾಖಲಿಸದೇ ಅವರ ಕೆಲಸಕ್ಕೆ ಅವಕಾಶ ಮಾಡಿಕೊಟ್ಟು ಹೋಗಿರುವದು ಅಧಿಕಾರಿಗಳ ನಡೆಯ ಮೇಲೆ ಅನುಮಾನ ಹುಟ್ಟಿಸಿದೆ ಅಲ್ಲದೇ ಈ ವಿಷಯ ಕುರಿತು ಅಧಿಕಾರಿಯ ಜೊತೆಗೆ ಮಾಧ್ಯಮದವರು ಚರ್ಚೆಗೆ ಹೋದಾಗ ಯಮರ್ಜೆನ್ಸಿ ಕೆಲಸಕ್ಕೆ ಬಳಿಸಿದ್ದಾರೆ ಇನ್ನೊಮ್ಮೆ ಬಳಿಸದಂತೆ ತಿಳಿಸಿದ್ದೇನೆಂದು ಉಢಾಫೆ ಉತ್ತರ ನೀಡಿ ತೆರಳಿರುವದು ಅಕ್ರಮ ಸಿಲಿಂಡರ್ ಬಳಿಕೆಗೆ ಅಧಿಕಾರಿಗಳೇ ಸಹಕರಿಸುತ್ತಿದ್ದಾರೆಯೇ ಎಂಬ ಪ್ರಶ್ನೇ ಮೂಡಿದೆ.

ಗ್ರಹ ಬಳಿಕೆಯ ಸಿಲಿಂಡರ್‍ನ್ನು ನಿಯಮ ಉಲ್ಲಂಘಿಸಿ ವಾಣಿಜ್ಯ ಉದ್ದೇಶಗಳಿಗೆ ಬಳಸಿದರೆ ಸರ್ಕಾರವು ದಂಡ ವಿಧಿಸುತ್ತದೆ ಮತ್ತು ಸಿಲಿಂಡರ್‍ಗಳನ್ನು ಜಪ್ತಿ ಮಾಡುವ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಸರ್ಕಾರದ ಕಠಿಣ ಆದೇಶವನ್ನೇ ತಾಲೂಕಾ ಆಹಾರ ನಿರಿಕ್ಷಕರು ಗಾಳಿಗೆ ತೂರಿ ಸಹಕರಿಸಿರುವದು ಏಷ್ಟು ಸರಿ ಎಂಬ ಪ್ರಶ್ನೇ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಕಮರ್ಷಿಯಲ್ ಯಾವುದೇ ಕೆಲಸಕ್ಕೂ ಗ್ರಹ ಬಳಿಕೆ ಸಿಲಿಂಡರ್ ಬಳಿಸಿದರೂ ಕಾನೂನು ಪ್ರಕಾರ ಅಪರಾಧವಾಗುತ್ತದೆ ನಮ್ಮ ಇಲಾಖೆಯಿಂದ ಅಂತಹ ಸಿಲಿಂಡರ್‍ಗಳನ್ನು ಜಪ್ತಮಾಡಿ ಕ್ರೀಮಿನಲ್ ಕೇಸ್ ದಾಖಲಿಸುತ್ತೇವೆ ಈಗಾಗಲೇ ಈ ಕುರಿತು ಪ್ರತಿಕೆಗಳ ಮೂಲಕವಾಗಿ ಗ್ರಹ ಬಳಿಕೆ ಸಿಲಿಂಡರ್‍ಗಳನ್ನು ಕಮರ್ಷಿಯಲ್ ಕೆಲಸಕ್ಕೆ ಬಳೆಸದಂತೆ ಏಚ್ಚರಿಸಿದ್ದೇವೆ ತಾಳಿಕೋಟೆಯಲ್ಲಿ ಪೈಪಲೈನ್‍ಗೆ ವ್ಹೇಲ್ಡಿಂಗ್ ಮಾಡಲು ಗ್ರಹ ಬಳಿಕೆ ಸಿಲಿಂಡರ್ ಬಳಕೆ ಮಾಡಿರುವದು ನನ್ನ ಗಮನಕ್ಕೆ ಬಂದಿದೆ ನಮ್ಮ ಆಹಾರ ನಿರಿಕ್ಷಕರು ಸ್ಥಳಕ್ಕೆ ಹೋಗಿ ಕ್ರಮ ಜರುಗಿಸಲು ತಿಳಿಸಿದ್ದೆ ಗ್ಯಾಸ್ ಸಿಲಿಂಡರ್ ಜಪ್ತಮಾಡದೇ ಹಾಗೆ ಬಿಟ್ಟು ಬಂದಿರುವದು ಗಮನಕ್ಕೆ ಬಂದಿದೆ ಅವರಿಗೆ ಶೋಕಾಸ್ ನೋಟಿಸ್ಸು ಜಾರಿ ಮಾಡಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
                                                ವಿನಯಕುಮಾರ ಪಾಟೀಲ ಉಪನಿರ್ದೇಶಕರು 

ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ

ಗ್ರಹ ಬಳಿಕೆ ಸಿಲಿಂಡರ್‍ಗಳು ಜನರಿಗೆ ಸಿಗದೇ ಪರದಾಡುತ್ತಿದ್ದಾರೆ ಇಂತಹ ಸಂದರ್ಬದಲ್ಲಿ ಪೈಪಲೈನ್ ವ್ಹೇಲ್ಡಿಂಗ್ ಕಾರ್ಯಕ್ಕೆ ಕಾನೂನು ಭಾಹಿರವಾಗಿ ಬಳೆಸುತ್ತಿರುವದು ಗಮನಕ್ಕೆ ಬಂದ ಕೂಡಲೇ ಆಹಾರ ನಿರಿಕ್ಷಕರಿಗೆ ತಿಳಿಸಿದೆ ಅವರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಗುತ್ತಿಗೆದಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಯಮರ್ಜೆನ್ಸಿಗಾಗಿ ಬಳೆಸಿದ್ದಾರೆಂದು ಜಪ್ತ ಮಾಡದೇ ಹೋಗಿರುವದು ಅವರ ನಡೆಯ ಮೇಲೆ ಅನುಮಾನ ಹುಟ್ಟಿಸಿದೆ ಅಲ್ಲದೇ ಗ್ರಹ ಬಳಿಕೆಯ ಸಿಲಿಂಡರ್ ಅಕ್ರಮ ಅನ್ಯ ಕಾರ್ಯಕ್ಕೆ ಬಳಕೆ ಮಾಡಲು ಅಧಿಕಾರಿಗಳೇ ಸಹಕರಿಸುತ್ತಿರುವದು ದುರ್ದೈವದ ಸಂಗತಿಯಾಗಿದೆ.
                                ಮಲ್ಲಿಕಾರ್ಜುನ ಆನೇಸೂರ ಸಾಮಾಜಿಕ ಕಾರ್ಯಕರ್ತ