Home ಜಿಲ್ಲೆ ಸಮಾನತೆ ಮತ್ತು ಭಾವೈಕ್ಯದ ಸಂಕೇತವಾದ ಸಮವಸ್ತ್ರ: ನಾರಾಯಣ ಕುಲಕರ್ಣಿ

ಸಮಾನತೆ ಮತ್ತು ಭಾವೈಕ್ಯದ ಸಂಕೇತವಾದ ಸಮವಸ್ತ್ರ: ನಾರಾಯಣ ಕುಲಕರ್ಣಿ

ಬೀದರ್, ಜೂ 30: ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ಮಡಿವಾಳೇಶ್ವರ ಶಿಶುಮಂದಿರ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಮಂಗಲಪೇಟೆಯಲ್ಲಿ ಸಮವಸ್ತ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮರ್ಕೆಟ್ ಪೆÇಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ನಾರಾಯಣ ಕುಲರ್ಣಿ ಅವರು ಮಾತನಾಡಿ, ಸಮವಸ್ತ್ರವು ಬಡವ-ಶ್ರೀಮಂತ ಎಂಬ ಭೇದಭಾವವನ್ನು ದೂರ ಮಾಡಿ ಮಕ್ಕಳಲ್ಲಿ ಸಮಾನತೆ ಹಾಗೂ ಏಕತೆಯ ಭಾವನೆ ಬೆಳೆಸುವುದರ ಜೊತೆಗೆ ಶಿಸ್ತು ಮತ್ತು ಅನುಶಾಸನವನ್ನು ಮೈಗೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು. ಶಾಲೆಯ ವಿದ್ಯರ್ಥಿಗಳು ಅಚ್ಚುಕಟ್ಟಾಗಿ ಸಮವಸ್ತ್ರ ಧರಿಸಿರುವುದನ್ನು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನರ್ವ ಅತಿಥಿಯಾಗಿದ್ದ ಮರ್ಕೆಟ್ ಪೆÇಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಅನಿತಾ ಪೆÇೀಲ್‍ದಾಸ್ ಅವರು, ವಿದ್ಯರ್ಥಿಗಳು ಶಾಲೆಯು ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು. ಸಮವಸ್ತ್ರವು ವಿದ್ಯರ್ಥಿಗಳ ಶೈಕ್ಷಣಿಕ ಕರ್ಯಕ್ಷಮತೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿ, ಪ್ರತಿಯೊಬ್ಬ ವಿದ್ಯರ್ಥಿಯೂ ಸಮವಸ್ತ್ರದ ಬಗ್ಗೆ ಗೌರವ ಮತ್ತು ಅಭಿಮಾನ ಹೊಂದಿರಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಪೆÇ್ರ. ಎಸ್.ಬಿ. ಸಜ್ಜನಶೆಟ್ಟಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯರ್ಥಿಗಳು ಶಿಸ್ತು, ಸಂಯಮ ಮತ್ತು ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ಆರ್ಶ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು. ಜೊತೆಗೆ ಪ್ರತಿದಿನ ಸಮವಸ್ತ್ರವನ್ನು ಅಚ್ಚುಕಟ್ಟಾಗಿ ಹಾಗೂ ನಿಯಮಿತವಾಗಿ ಧರಿಸಿಕೊಂಡು ಬರಬೇಕು ಎಂದು ತಿಳಿಸಿದರು.

ಕರ್ಯಕ್ರಮದ ಅಂಗವಾಗಿ ಅತಿಥಿಗಳು ಮತ್ತು ಅಧ್ಯಕ್ಷರು ವಿದ್ಯರ್ಥಿಗಳ ಸಮವಸ್ತ್ರವನ್ನು ವೀಕ್ಷಿಸಿ, ಅತ್ಯುತ್ತಮ ಸಮವಸ್ತ್ರ ಧರಿಸಿದ್ದ ವಿದ್ಯರ್ಥಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.

ಈ ಸಂರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯಗುರು ಶರಣು ಪಾಟೀಲ, ಪ್ರಾಥಮಿಕ ಶಾಲೆಯ ಮುಖ್ಯಗುರು ರ್ಚನಾ ಶಿರಗೆರೆ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಕರ್ಯಕ್ರಮದಲ್ಲಿ 9ನೇ ತರಗತಿಯ ವಿದ್ಯರ್ಥಿನಿ ದಿವ್ಯ ನಾಗೇಶ ಸ್ವಾಗತಿಸಿದರು. ಆದಿತಿ ದತ್ತಾತ್ರಿ ವಂದಿಸಿದರು. ವೈಷ್ಣವಿ ವಿಜಯಲಕ್ಷ್ಮೀ ಕೃಷ್ಣ ಕರ್ಯಕ್ರಮ ನಿರೂಪಿಸಿದರು. ರ್ಪಿತಾ ನಾಗೇಶ ವೈಯಕ್ತಿಕ ಗೀತೆ ಹಾಡಿದರು. ರಾಷ್ಟ್ರಗೀತೆಯೊಂದಿಗೆ ಕರ್ಯಕ್ರಮ ಮುಕ್ತಾಯಗೊಂಡಿತು.