
ಬಸವಕಲ್ಯಾಣ:ಆ.1: ರಾಜಕಾರಣಿಗಳ ಬಗ್ಗೆ ನಂಬಿಕೆ ಕಡಿಮೆಯಾಗಿದ್ದರಬಹುದು. ಪತ್ರಿಕೆಗಳ ಮೇಲೆ ಜನರ ನಂಬಿಕೆ ಗಾಢವಾಗಿದೆ. ಸಮಾಜದ ಅಂಕು ಡೊಂಕು ತಿದ್ದುವ ಕೆಲಸ ಮಾಧ್ಯಮಗಳು ಮಾಡುತ್ತವೆ. ರಾಜಕಾರಣಿಗಳಿಂದ ಆಗಿದ ಕೆಲಸಗಳು ಮಾಧ್ಯಮದಿಂದ ಸಾಧ್ಯವಾಗಿವೆ ಎಂದು ಶಾಸಕ ಶರಣು ಸಲಗರ ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಪತ್ರಿಕಾ ದಿನಾಚರಣೆ ಹಾಗೂ ಶಂಕರ ಪ್ರಸಾದ ದುಬೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಎರಡು ಅವಧಿಗೆ ಶಾಸಕನಾಗಿ ಆಯ್ಕೆಯಾಗಲು ಸ್ಥಳೀಯ ಪತ್ರಕರ್ತರು ಸಾಕಷ್ಟು ಸಹರಿಸಿದ್ದಾರೆ, ಜನಪರ ಸಮಸ್ಯೆಗಳನ್ನು ಬೆಳಕಿಗೆ ತರುವ ಮೂಲಕ ಆಡಳಿತದ ಕಣ್ಣು ತೆರೆಸಿ ಕ್ಷೇತ್ರದ ಅಭಿವೃದ್ಧಿಗೆ ಪತ್ರಕರ್ತರ ತಮ್ಮದೆಯಾದ ಕೊಡುಗೆ ನೀಡುತಿದ್ದಾರೆ. ಪತ್ರಕರ್ತರು ಅನೇಕ ಸಂಗತಿಗಳನ್ನು ಬರೆದು ನಮ್ಮ ಗಮನಕ್ಕೆ ತಂದಿದ್ದಾರೆ. ನಾನು ಅವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೆನೆ ಎಂದ ಅವರು, ಪತ್ರಿಕಾ ಭವನಕ್ಕೆ ನಿವೇಶನ ಇದ್ದರೆ, ಅದಕ್ಕೆ ಬೇಕಾದ ಅನುದಾನವನ್ನು ಕೆಕೆಆರ್‍ಡಿಬಿಯಿಂದ ಬಿಡುಗಡೆಗೊಳಿಸಿ ಪತ್ರಿಕಾ ಭವನ ನಿರ್ಮಿಸುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಮಾತನಾಡಿ, ಸಾಮಾಜಿಕ ಬೆಳವಣಿಗೆಗೆ ಮಾಧ್ಯಮ ಹೆಚ್ಚು ಒತ್ತು ನೀಡಿದೆ. ಆಡಳಿತಾತ್ಮಕ ಸುಧಾರಣೆ, ಪ್ರಭುತ್ವದ ಪ್ರಜ್ಞಾಪೂರ್ವಕ ಕೆಲಸಕ್ಕೆ ಅಣಿಯಾಗಲು ಎಚ್ಚರಿಸುತ್ತದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪತ್ರಿಕಾ ಭವನ ನಿರ್ಮಾಣ ಮತ್ತು ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆಗೆ ನೀಡಬೇಕಿದೆ ಎಂದರು.
ಸಹಾಯಕ ಆಯುಕ್ತ ಪ್ರಕಾಶ್ ಕುದರಿ ಮಾತನಾಡಿ, ಸರ್ಕಾರದ ಯೋಜನೆಗಳು ಅನುμÁ್ಠನಕ್ಕೆ ತರುವ ಕೆಲಸ ಮಾಧ್ಯಮಳಿಂದ ನಡೆಯುತ್ತದೆ. ಸಾರ್ವಜನಿಕರ ಮತ್ತು ಸರ್ಕಾರದ ನಡುವಿನ ಸೇತುವೆಯಾಗಿ ಮಾಧ್ಯಮಗಳಿವೆ. ವಾಸ್ತವ ಸುದ್ದಿಗಳಿಗೆ ಮಾಧ್ಯಮಗಳು ಬೆಳಕು ಚೆಲ್ಲುತ್ತವೆ ಎಂದರು.
ಡಿವೈಎಸ್ಪಿ ಮಡೋಳಪ್ಪ ಅವರು ಮಾತನಾಡಿ, ಯಾವುದೇ ಘಟನೆಯಾದರೂ ಪೆÇಲೀಸರು ಮತ್ತು ಪತ್ರಕರ್ತರು ಘಟನಾ ಸ್ಥಳಕ್ಕೆ ಹೋಗುತ್ತಾರೆ. ಪೆÇಲೀಸ್‍ರ ತನಿಖೆ ಮತ್ತು ಪತ್ರಕರ್ತರ ಪರೀಶೀಲನೆ ವಸ್ತುನಿಷ್ಠತೆ ಆದ್ಯತೆ ಇರುತ್ತದೆ. ಪತ್ರಿಕಗಳು ಸಂವಿಧಾನದ ನಾಲ್ಕನೆ ಅಂಗವೆಂದು ಕರೆಯಲಾಗುತ್ತದೆ. ಈ ಸಮಾಜದಲ್ಲಿ ಪತ್ರಿಕೆ ಮತ್ತು ಪೆÇೀಲಿಸರ ಸೇವೆ ಬಹಳ ಮಹತ್ವವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಮಾತನಾಡಿ, ದೇಶದ ಸ್ವಾತಂತ್ರ್ಯದಲ್ಲಿ, ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಪತ್ರಿಕೆಗಳು ಸಮಾಜದ ಕನ್ನಡಿ. ಹಲವು ಸಮಸ್ಯೆಗಳನ್ನು ಅಧಿಕಾರದಲ್ಲಿರುವವರ ಎದುರಿಗೆ ತಂದು ಇಡುವ ಕೆಲಸ ಮಾಡುತ್ತವೆ ಎಂದರು.
ಜಿಲ್ಲಾ ಕಾರ್ಯದರ್ಶಿ ಶಶಿಕಾಂತ ಶೆಂಬೆಳ್ಳಿ, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ ನಾರಾಯಣರಾವ್ ಮಾತನಾಡಿದರು. ಭೀಮರಾಯನ ಗುಡಿ ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ದಿಲೀಪ್ ಕುಮಾರ್ ಉತ್ತಮ, ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಪ್ಪಾರಾವ್ ಸೌದಿ, ಪ್ರಶಸ್ತಿ ಪ್ರಾಯೋಜಕರಾದ ಚಂದ್ರಶೇಖರ ದುಬೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಘಟಕದ ಉಪಾಧ್ಯಕ್ಷ ಪೃಥ್ವಿರಾಜ ಎಸ್. ಖಜಾಂಚಿ ಸುನಿಲ್ ಕುಮಾರ್ ಕುಲಕರ್ಣಿ, ತಾಲೂಕು ಘಟಕದ ಪದಾಧಿಕಾರಿಗಳಾದ ಡಿಕೆ ಪ್ರಹ್ಲಾದ್, ಎಂಡಿ. ನಯಮೋದ್ದಿನ್, ಶಿವಪುತ್ರ ಪಾಟೀಲ, ಪ್ರದೀಪ್ ವಿಸಾಜಿ, ವೀರಶೆಟ್ಟಿ ಮಲಶೆಟ್ಟಿ, ಕಲ್ಯಾಣರಾವ ಮದರಗಾಂವಕರ್, ಮಾಣಿಕ್ ಭುರೆ, ಧನರಾಜ್ ರಾಜೋಳೆ, ಎಂಡಿ ಖುತಬೋದ್ದಿನ್, ಖಾಜಾ ಸರ್ತಾಜೋದ್ದೀನ್, ಮಲ್ಲಿಕಾರ್ಜುನ ಬಂಡೆ, ವೀರಶೆಟ್ಟಿ ಯರಂಡಗೆ, ಜುಬೇರ್ ನವಾಜ್, ಮಲ್ಲಿಕಾರ್ಜುನ ಮಲಶೆಟ್ಟಿ, ಶರದ್ ದುಬೆ, ವಿಜಯಕುಮಾರ ಬೆಲ್ದೆ ಮತ್ತು ಶಂಕರ್ ಪ್ರಸಾದ್ ದುಬೆ ಪರಿವಾರದವರು ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾಥರ್ಂಡ ಜ್ಯೋಷಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಮುಳೆ ಪ್ರಶಸ್ತಿ ಪತ್ರ ವಾಚಿಸಿದರು. ಜಿಲ್ಲಾ ಕಾರ್ಯಕಾರಿ ಸದಸ್ಯ ಗುರುನಾಥ ಗಡ್ಡೆ ಪ್ರಾಸ್ತಾವಿಕ ಮಾತನಾಡಿದರು. ಎಂಡಿ ನೈಮೋದ್ದಿನ್ ವಂದಿಸಿದರು.
ತಾಲೂಕಿನ ಎಲ್ಲಾ ಪತ್ರಕರ್ತರಿಗೆ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮದವರಿಗೆ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಓದುವ ಹವ್ಯಾಸ ಕಡಿಮೆಯಾಗುತ್ತಿದೆ: ರಶ್ಮಿ
ಶಂಕರ ಪ್ರಸಾದ್ ದುಬೆ ಪ್ರಶಸ್ತಿ ಸ್ವೀಕರಿಸಿದ ಬೆಂಗಳೂರಿನ ಹಿರಿಯ ಪತ್ರಕರ್ತೆ ರಶ್ಮಿ ಎಸ್ ಮಾತನಾಡಿ, ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಅದರಿಂದ ಜನರ ನೆಮ್ಮದಿ ಕಳೆದು ಹೋಗುತ್ತಿದೆ. ಪತ್ರಿಕೆಗಳು ಸೇರಿ ಒಟ್ಟು ಏನನ್ನಾದರೂ ಓದುವಿಕೆ ಇದ್ದರೆಯೇ ಅಂತಃಕರಣದ ಸಮಾಜ ರೂಪಿಸಲು ಸಾಧ್ಯ ಎಂದರು.
ಕಲ್ಯಾಣದಲ್ಲಿ ಹನ್ನೆರಡನೇ ಶತಮಾನದಲ್ಲಿಯೇ ಸಿಟಿಜನ್ ಜರ್ನಲಿಸಂ ಆರಂಭವಾಗಿತ್ತು. ಸಮಾಜದ ಓರೆಕೋರೆಗಳನ್ನು ಗುರುತಿಸುವ, ಸಮಸ್ಯೆಗಳನ್ನು ಗ್ರಹಿಸುವ, ಪರಿಹಾರ ಕಂಡುಕೊಳ್ಳುವ, ಪ್ರಭುತ್ವ ಪ್ರಶ್ನಿಸುವ ಕೆಲಸ ವಚನಕಾರರು ಅಂದೇ ಮಾಡಿದ್ದರು. ಹಾಗೆಯೇ ಅವರು ಸಾತ್ವಿಕ ಮಾರ್ಗ ಅನುಸರಿಸಿದ್ದರು ಎಂದರು.
ಸಹನಾಭೂತಿ ಒಂದೇ ನಮ್ಮನ್ನು ಪಶುಗಳಿಂದ, ಪಕ್ಷಿಗಳಿಂದ ಬೇರ್ಪಡಿಸಿ ಮನುಷ್ಯನನ್ನಾಗಿಸಿದೆ. ಸ್ವಾವಲಂಬನೆಗೆ, ಸ್ವಯಂಭೂಗಾಗಿ, ಸಾಮುದಾಯಿಕ ಹಿತಕ್ಕೆ ಪತ್ರಿಕೆ ಓದಬೇಕು ಎಂದರು.






























